Advertisement

ದಿನಪೂರ್ತಿ ಏಳುಬೀಳು; ಅಲ್ಪ ಏರಿಕೆಗೆ ಮುಂಬಯಿ ಶೇರು ತೃಪ್ತ

11:17 AM Jan 16, 2019 | |

ಮುಂಬಯಿ : ವಹಿವಾಟಿನ ಉದ್ದಕ್ಕೂ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು ಅಲ್ಪ ಏರಿಕೆಯ ರೂಪದಲ್ಲಿ 2.96 ಅಂಕಗಳ ಮುನ್ನಡೆಯೊದಿಗೆ 36,321.29 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 3.50 ಅಂಕಗಳ ಅಲ್ಪ ಏರಿಕೆಗೆ ತೃಪ್ತಿ ಪಟ್ಟು ದಿನದ ವಹಿವಾಟನ್ನು 10,890.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಎಸ್‌ ಬ್ಯಾಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಇನ್‌ಫೋಸಿಸ್‌, ಐಸಿಐಸಿಐ ಬ್ಯಾಂಕ್‌, ಟಿಸಿಎಸ್‌, ಎಸ್‌ಬಿಐ, ರಿಲಯನ್ಸ್‌, ಒಎನ್‌ಜಿಸಿ, ಎಕ್ಸಿಸ್‌ ಬ್ಯಾಂಕ್‌ ಮತ್ತು ಎನ್‌ಟಿಪಿಸಿ ಶೇರುಗಳು ಶೇ.2.66ರಷ್ಟು ಏರಿದವು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು  2,725  ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,225 ಕಂಪೆನಿಗಳು ಮುನ್ನಡೆ ಸಾಧಿಸಿದವು;  1,354 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 146 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next