ಮುಂಬಯಿ : ಕೊನೇ ತಾಸಿನಲ್ಲಿ ಕಂಡು ಬಂದ ಮಾರಾಟ ಒತ್ತಡಕ್ಕೆ ಮಣಿದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬೆಳಗ್ಗಿನ ಗಳಿಕೆಯ ಬಹುಪಾಲನ್ನು ಬಿಟ್ಟುಕೊಟ್ಟು ದಿನಾಂತ್ಯಕ್ಕೆ ಕೇವಲ 10.09 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು ದಿನದ ವಹಿವಾಟನ್ನು 33,157.22 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,323.00 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,312 ಶೇರುಗಳ ಮುನ್ನಡೆಯನ್ನು ಕಂಡರೆ 1,293 ಶೇರುಗಳು ಹಿನ್ನಡೆಗೆ ಗುರಿಯಾದವು; 135 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಮಿಡ್ ಕ್ಯಾಪ್ ಶೇರುಗಳು ಮಟ್ಟಸ ಅಂತ್ಯವನ್ನು ಕಂಡರೆ ಬ್ಯಾಂಕ್, ಒಎಂಸಿ ಮತ್ತು ಮೆಟಲ್ ಶೇರುಗಳು ಶೇರು ಪೇಟೆಯನ್ನು ಕೆಳಕ್ಕೆ ಎಳೆದವು.
ಅದಾನಿ ಪೋರ್ಟ್, ಸನ್ ಫಾರ್ಮಾ, ಬಜಾಜ್ ಫೈನಾನ್ಸ್ ಟಾಪ್ ಗೇನರ್ ಎನಿಸಿಕೊಂಡರೆ ಭಾರ್ತಿ ಏರ್‌ಟೆಲ್, ಎಸ್‌ಬಿಐ ಮತ್ತು ಎಸ್ ಬ್ಯಾಂಕ್ ಟಾಪ್ ಲೂಸರ್‌ಎನಿಸಿಕೊಂಡವು.