Advertisement

ಆರಂಭಿಕ ವಹಿವಾಟಿನಲ್ಲಿ 34 ಅಂಕಗಳ ಮುನ್ನಡೆ ಪಡೆದ ಮುಂಬಯಿ ಶೇರು

11:17 AM Jun 05, 2017 | |

ಮುಂಬಯಿ : ಹೂಡಿಕೆದಾರರು ಹಾಗೂ ವಹಿವಾಟುದಾರರು ಎಚ್ಚರಿಕೆ ನಡೆ ಇಟ್ಟಿರುವ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು 34 ಅಂಕಗಳ ಮುನ್ನಡೆಯನ್ನು ಕಂಡಿದೆ.

Advertisement

ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 34.89 ಅಂಕಗಳ ಮುನ್ನಡೆಯೊಂದಿಗೆ 31,308.18 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18.80 ಅಂಕಗಳ ಮುನ್ನಡೆಯೊಂದಿಗೆ 9,672.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಸನ್‌ ಫಾರ್ಮಾ ಸಿಪ್ಲಾ, ಬಿಎಚ್‌ಇಎಲ್‌, ಅದಾನಿ ಪೋರ್ಟ್‌, ಹೀರೋ ಮೋಟೋ ಕಾರ್ಪ್‌, ಭಾರ್ತಿ ಇನ್‌ಫ್ರಾಟೆಲ್‌, ಐಓಸಿ, ಇಂಡಿಯಾಬುಲ್ಸ್‌ ಹೌಸಿಂಗ್‌ ಮತ್ತು ಅರಬಿಂದೋ ಪಾರ್ಮಾ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದ್ದವು. 

ಭಾರತೀಯ ಸೇವಾ ರಂಗದ ಸೂಚ್ಯಂಕಗಳು ಸುಧಾರಿಸಿರುವುದು,  ಹೊಸ ಉದ್ಯಮಗಳಿಗೆ ಬಂಡವಾಳ ಹರಿದು ಬಂದಿರುವುದು , ಆರ್ಥಿಕ ಹಾಗೂ ಉದ್ಯೋಗ ಸ್ಥಿತಿಗತಿ ಸುಧಾರಿಸಿರುವುದು ಮುಂಬಯಿ ಶೇರು ಪೇಟೆಯ ಇಂದಿನ ಮುನ್ನಡೆಗೆ ಕಾರಣವೆಂದು ತಿಳಿಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next