Advertisement

ಸೆಬಿ ಉಪಕ್ರಮಗಳ ಫ‌ಲಶ್ರುತಿ; ಮುಂಬಯಿ ಶೇರು 136 ಅಂಕ ಜಿಗಿತ

11:06 AM Jun 22, 2017 | udayavani editorial |

ಮುಂಬಯಿ : ಬ್ಯಾಂಕುಗಳ ಬಾಕಿ ಸಾಲ ವಸೂಲಾತಿ ಕ್ರಮವನ್ನು ಚುರುಕುಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ  ಗರಿಗೆದರಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ  136 ಅಂಕಗಳ ಜಿಗಿತವನ್ನು ದಾಖಲಿಸಿತು.  ಶೇರು ಹೂಡಿಕೆಯನ್ನು ಆಕರ್ಷಕಗೊಳಿಸಲು ಸೆಬಿ ಕೈಗೊಂಡಿರುವ ಹಲವಾರು ಉಪಕ್ರಮಗಳು ಕೂಡ ಶೇರು ಮಾರುಕಟ್ಟೆಗೆ ಇಂದು ಚೇತೋಹಾರಿ ಎನಿಸಿತು.

Advertisement

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌ 175.85 ಅಂಕಗಳ ಏರಿಕೆಯೊಂದಿಗೆ 31,459.49 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 45.25 ಅಂಕಗಳ ಏರಿಕೆಯೊಂದಿಗೆ 9,678.85 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ರಿಲಯನ್ಸ್‌, ಮಾರುತಿ ಸುಜುಕಿ, ಎಚ್‌ ಡಿ ಎಫ್ ಸಿ, ಅರಬಿಂದೋ ಫಾರ್ಮಾ, ಲೂಪಿನ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next