ಮುಂಬಯಿ : ಇಂದು ಪ್ರಕಟಗೊಳ್ಳಲಿರುವ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ಆಶಾದಾಯಕವಾಗಿ ಇರುವುವೆಂಬ ವಿಶ್ವಾಸದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 155ಕ್ಕೂ ಹೆಚ್ಚು ಅಂಕಗಳ ಜಿಗಿತವನ್ನು ಸಾಧಿಸಿತು.
ವಿದೇಶಿ ಬಂಡವಾಳದಲ್ಲಿನ ಹೊಸ ಒಳ ಹರಿವು, ಏಶ್ಯನ್ ಶೇರು ಮಾರುಕಟ್ಟೆಯಲ್ಲಿ ತೋರಿ ಬಂದಿರುವ ಧನಾತ್ಮಕತೆಯೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯಲ್ಲಿ ಇಂದು ಬೆಳಗ್ಗೆ ತೇಜಿಯ ವಾತಾವರಣ ಕಂಡು ಬಂತು.
ಹಾಗಿದ್ದರೂ ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 13.51 ಅಂಕಗಳ ನಷ್ಟಕ್ಕೆ ಗುರಿಯಾಗಿ 35,145.04 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,584.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್‌ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 26 ಪೈಸೆಯ ಕುಸಿತ ಕಂಡ 72.76 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟೈಟಾನ್ ಕಂಪೆನಿ, ಎಸ್ ಬ್ಯಾಂಕ್, ಎಸ್‌ಬಿಐ, ಮಾರುತಿ ಸುಜುಕಿ, ಸಿಪ್ಲಾ ಶೇರುಗಳು ಇಂದು ಬೆಳಗ್ಗೆ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು: ಟೈಟಾನ್ ಕಂಪೆನಿ, ಟೆಕ್ ಮಹೀಂದ್ರ, ಇನ್‌ಫೋಸಿಸ್, ಎಚ್ ಸಿ ಎಲ್ ಟೆಕ್, ಕೋಟಕ್ ಮಹೀಂದ್ರ; ಟಾಪ್ ಲೂಸರ್‌ಗಳು : ಎಚ್‌ಪಿಸಿಎಲ್, ಟಾಟಾ ಮೋಟರ್, ಎಸ್ ಬ್ಯಾಂಕ್, ಹಿಂಡಾಲ್ಕೊ, ಭಾರ್ತಿ ಇನ್‌ಫ್ರಾಟೆಲ್.