ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಚುನಾವಣಾ ಪೂರ್ವ ರಾಲಿ ಮುಂದುವರಿದಿದೆ. ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 150ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿದರೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 11,400ರ ಗಡಿಗೆ ನಿಕಟವಾಗಿದೆ.
ದೇಶೀಯ ಸ್ಥಿತಿಗತಿ ಧನಾತ್ಮಕವಾಗಿರುವುದು, ವಿದೇಶೀ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬರುತ್ತಿದೆ.
ಇಂದು ಗುರುವಾರ ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 18.82 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,770.99 ಅಂಕಗಳ ಮಟ್ಟದಲ್ಲೂ ನಿಫ್ಟಿ 1.20 ಅಂಕಗಳ ಹಿನ್ನಡೆಯೊಂದಿಗೆ 11,340.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ರಿಲಯನ್ಸ್, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 24 ಪೈಸೆಗಳ ಕುಸಿತಕ್ಕೆ ಗುರಿಯಾಗಿ 69.78 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.