Advertisement
ಬಿಎಸ್‌ಇ ವಹಿವಾಟಿನ ಪ್ರಧಾನ ಅಂಶವೆಂದರೆ ಮಧ್ಯಾಂತರದಲ್ಲಿ ಸೂಚ್ಯಂಕ 46,309.63ಕ್ಕೆ ಏರಿಕೆ ಯಾದದ್ದು. ಅನಂತರ ಅದೇ ಉತ್ಸಾಹ ಉಳಿದೆಯೇ ಇದ್ದರೂ, ಹೂಡಿಕೆದಾರರಿಗೆ ನಿರಾಶೆಯಾಗಲಿಲ್ಲ. ಒಎನ್‌ಜಿಸಿಯ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಎನ್‌ಟಿಪಿಸಿ, ಟಾಟಾ ಸ್ಟೀಲ್, ಐಟಿಸಿ, ಐಸಿಐಸಿಐ ಬ್ಯಾಂಕ್, ಟೈಟನ್, ಬಜಾಜ್ ಅಟೋ ಮತ್ತು ಎಸ್‌ಬಿಐ ಷೇರುಗಳು ಅನಂತರದ ಸ್ಥಾನಗಳಲ್ಲಿ ಬಿಕರಿ ಯಾದವು. ಗುರುವಾರ ಹೊರತುಪಡಿಸಿ ಈ ವಾರ ಬಿಎಸ್‌ಇ ಸೂಚ್ಯಂಕ 1,019.46, ನಿಫ್ಟಿ ಸೂಚ್ಯಂಕ 255.30 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿವೆ.
ಅಮೆರಿಕದ ಡಾಲರ್ ಎದುರು ರೂಪಾಯಿ 2 ಪೈಸೆಯಷ್ಟು ಮಾತ್ರ ವ್ಯವಹಾರ ನಡೆಸಲು ಶಕ್ತವಾಯಿತು. ಅಂದರೆ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. 73.65 ರೂ.ಗಳಿಂದ ಶುರುವಾದ ವಹಿವಾಟು ಮಧ್ಯಾಂತರದಲ್ಲಿ 73.56ಕ್ಕೆ ಏರಿಕೆಯಾಯಿತು. ದಿನಾಂತ್ಯಕ್ಕೆ ಅದು 73.71 ರೂ.ಗಳಲ್ಲಿ ಕೊನೆಗೊಂಡಿತು. ಕಾರಣಗಳೇನು?
ಬ್ರೆಕ್ಸಿಟ್ ಡೀಲ್, ಅಮೆರಿಕದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಬಗೆಗಿನ ಮಾತುಕತೆ ಪ್ರಗತಿ ಕಾಣದ್ದು ಕೊಂಚ ಸೂಚ್ಯಂಕ ಏರಿಳಿತಕ್ಕೆ ಕಾರಣ ಧನಾತ್ಮಕವಾಗಿ ವಹಿವಾಟು ಶುರುವಾದರೂ, ಜಾಗತಿಕ ಷೇರುಪೇಟೆಯ ಪ್ರಭಾವ ಸೆನ್ಸೆಕ್ಸ್ ಓಟಕ್ಕೆ ಬ್ರೇಕ್.
ಬಿಎಸ್‌ಇನಲ್ಲಿ ಕೊನೆಯ ಹಂತದಲ್ಲಿ ಖರೀದಿ ಮೂಡ್ ಇದ್ದ ಕಾರಣ ಪರಿಸ್ಥಿತಿ ಸುಧಾರಿಸಲು ನೆರವು