ಮುಂಬಯಿ: ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದಿನ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 33,295 ಅಂಕಗಳ ಉತ್ತಮ ಜಿಗಿತವನ್ನು ಕಂಡು ಹೊಸ ದಾಖಲೆಯ ಎತ್ತರ ಏರಿತು. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ದಾಖಲೆಯ 10,369.00 ಅಂಕಗಳ ಮಟ್ಟವನ್ನು ತಲುಪಿತು.
ಈ ಮೂಲಕ ಸೆನ್ಸೆಕ್ಸ್ ಹಾಗೂ ನಿಫ್ಟಿ ಈ ಬಾರಿಯ ತ್ತೈಮಾಸಿಕ ಫಲಿತಾಂಶಗಳು ಆಶಾದಾಯಕವಾಗಿರುವ ಸಂದೇಶವನ್ನು ಹೂಡಿಕೆದಾರರಿಗೆ ತಲುಪಿಸಿದವು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 145.54 ಅಂಕಗಳ ಏರಿಕೆಯೊಂದಿಗೆ 33,032.76 ಅಂಕಗಳ ಮಟ್ಟದಲ್ಲೂ, ನಿಫ್ಟಿ 52.80 ಅಂಕಗಳ ಏರಿಕೆಯೊಂದಿಗೆ 10,375.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಮಾರುತಿ ಸುಜುಕಿ, ಎಸ್ ಬ್ಯಾಂಕ್, ಒಎನ್‌ಜಿಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಬಿಪಿಸಿಎಲ್, ಒಎನ್‌ಜಿಸಿ, ಅಂಬುಜಾ ಸಿಮೆಂಟ್ಸ್, ಟಾಟಾ ಪವರ್, ಎಚ್‌ಪಿಸಿಎಲ್.
ಟಾಪ್ ಲೂಸರ್‌ಗಳು : ಸಿಪ್ಲಾ, ವಿಪ್ರೋ, ಡಾ.ರೆಡ್ಡಿ, ಕೋಲ್ ಇಂಡಿಯಾ, ಅದಾನಿ ಪೋರ್ಟ್.