ಮುಂಬಯಿ : ಕೇಂದ್ರ ಸರಕಾರ ಗ್ರಾಮೀಣ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂಬ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 119 ಅಂಕಗಳ ಮುನ್ನಡೆಯನ್ನು ಸಾಧಿಸಿತು. ಈ ಮೂಲಕ ಸೆನ್ಸೆಕ್ಸ್ 33,956 ಅಂಕಗಳ ಹೊಸ ಎತ್ತರವನ್ನು ಸಾಧಿಸಿದರೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 10,494 ಅಂಕಗಳ ಇನ್ನೊಂದು ಎತ್ತರವನ್ನು ಕಂಡಿತು.
ಅಮೆರಿಕದ ತೆರಿಗೆ ಕಡಿತ ಮಸೂದೆಯು ಅಂತಿಮ ಮತದಾನದ ನಿರ್ಣಾಯಕ ಹಂತವನ್ನು ತಲುಪಿರುವಂತೆಯೇ ಏಶ್ಯನ್ ಶೇರು ಪೇಟೆಗಳಲ್ಲಿ ಇಂದು ಮಿಶ್ರ ಪ್ರತಿಕ್ರಿಯ ವ್ಯಕ್ತವಾದವು.
ಕಳೆದ ನಾಲ್ಕು ದಿನಗಳ ನಿರಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 783.79 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ಇಂದು ಬುಧವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 9.84 ಅಂಕಗಳ ನಷ್ಟದೊಂದಿಗೆ 33,826.90 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.40 ಅಂಕಗಳ ಮುನ್ನಡೆಯೊಂದಿಗೆ 10,459.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಮಾರುತಿ ಸುಜುಕಿ, ಟಾಟಾ ಸ್ಟೀಲ್, ಮಹಿಂದ್ರ, ಟಾಟಾ ಮೋಟರ್, ಲಾರ್ಸನ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.