ಮುಂಬಯಿ : ದಿನದ ಉದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 67.35 ಅಂಕಗಳ ಏರಿಕೆಯೊಂದಿಗೆ 29,926.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 25.40 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,310.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಹಾಗೂ ನಿಫ್ಟಿಯ ಇಂದಿನ ಏರಿಕೆಗೆ ಬ್ಯಾಂಕ್ ಹಾಗೂ ಸಿಮೆಂಟ್ ಶೇರುಗಳೇ ಕಾರಣವಾದವು. ಮಾತ್ರವಲ್ಲದೇ ಇವು ನಿಫ್ಟಿ 9,300 ಅಂಕಗಳಿಗಿಂತ ಮೇಲ್ಮಟ್ಟದಲ್ಲಿ ಉಳಿಯುವುದಕ್ಕೆ ನೆರವಾದವು.
ಇಂದಿನ ವಹಿವಾಟಿನಲ್ಲಿ 1,634 ಶೇರುಗಳು ಮುನ್ನಡೆ ಕಂಡರೆ 1,155 ಶೇರುಗಳು ಹಿನ್ನಡೆಗೆ ಗುರಿಯಾದವು; 178 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಅಂಬುಜಾ ಸಿಮೆಂಟ್ಸ್, ಈಶರ್ ಮೋಟರ್, ಏಶ್ಯನ್ ಪೇಂಟ್ ಮತ್ತು ಲೂಪಿನ್ ಟಾಪ್ ಗೇನರ್ ಎನಿಸಿಕೊಂಡರೆ ಐಟಿಸಿ, ಎಚ್ ಡಿ ಎಫ್ ಸಿ, ಬಿಪಿಸಿಎಲ್ ಟಾಪ್ ಲೂಸರ್ ಎನಿಸಿಕೊಂಡವು.