Advertisement

ಚಿಲ್ಲರೆ ಹಣದುಬ್ಬರ 5 ತಿಂಗಳ ಗರಿಷ್ಠ: ಸೆನ್ಸೆಕ್ಸ್‌ 57 ಅಂಕ ಏರಿಕೆ

10:27 AM Sep 13, 2017 | udayavani editorial |

ಮುಂಬಯಿ : ಚಿಲ್ಲರೆ ಹಣದುಬ್ಬರ ಕಳೆದ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿರುವ ಹೊರತಾಗಿಯೂ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೋರಿದ ಆಸಕ್ತಿಯ ಫ‌ಲವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 57 ಅಂಕಗಳ ಮುನ್ನಡೆಯನ್ನು ದಾಖಲಿಸಿತು. 

Advertisement

ಕಳೆದ ನಾಲ್ಕು ದಿನಗಳ ನಿರಂತರ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಒಟ್ಟಾರೆಯಾಗಿ 496.69 ಅಂಕಗಳ ಮುನ್ನಡೆಯನ್ನು ಸಂಪಾದಿಸಿದ್ದು ಇಂದು ಕೂಡ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ತಿಳಿಯಲಾಗಿದೆ. 

ಬೆಳಗ್ಗೆ 10.30ರ ವೇಳೆಗೆ ಸೆನ್ಸೆಕ್ಸ್‌ 74.50 ಅಂಕಗಳ ಮುನ್ನಡೆಯನ್ನು ಸಾಧಿಸಿ 32,233.16 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.50 ಅಂಕಗಳ ಏರಿಕೆಯೊಂದಿಗೆ 10,110.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಬ್ಯಾಂಕ್‌ ನಿಫ್ಟಿ ಇಂದಿನ ಆರಂಭಿಕ ವಹಿವಾಟಿನಲ್ಲಿ 73.30 ಹಾಗೂ ನಿಫ್ಟಿ ಐಟಿ 67.10 ಅಂಕಗಳ ಮುನ್ನಡೆಯನ್ನು ದಾಖಲಿಸಿರುವುದು ಗಮನಾರ್ಹವೆನಿಸಿತು. ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಇಂದು 29 ಶೇರುಗಳು ಮುನ್ನಡೆ ಸಾಧಿಸಿದರೆ 22 ಶೇರುಗಳು ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next