Advertisement

ಏಶ್ಯನ್‌ ಶೇರು ಪೇಟೆ ತೇಜಿ: ಮುಂಬಯಿ ಶೇರು ಪೇಟೆ 118 ಅಂಕ ಜಿಗಿತ

10:58 AM May 08, 2017 | udayavani editorial |

ಮುಂಬಯಿ : ಏಶ್ಯನ್‌ ಶೇರು ಮಾರಕಟ್ಟೆಗಳಲ್ಲಿ ದೃಢತೆಯ ಪ್ರವೃತ್ತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 78 ಅಂಕಗಳ ಉತ್ತಮ ಏರಿಕೆಯನ್ನು ಕಂಡಿತು. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,300 ಅಂಕಗಳ ಗಡಿಯನ್ನು ದಾಟಿತು.

Advertisement

ಕಳೆದ ಶುಕ್ರವಾರ ಸೆನ್ಸೆಕ್ಸ್‌ 267.41 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದು ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಹೊಸ ಉತ್ತೇಜನ ತೋರಿಬಂದದ್ದೇ ಮುಂಬಯಿ ಶೇರು ಪೇಟೆಯ ಪುನಶ್ಚೇತನಕ್ಕೆ ಕಾರಣವಾಯಿತು. 

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌ 118.97 ಅಂಕಗಳ ಏರಿಕೆಯನ್ನು ಕಂಡು 29,977.77 ಅಂಕಗಳ ಮಟ್ಟದಲ್ಲೂ, ನಿಫ್ಟಿ 42.70 ಅಂಕಗಳ ಮುನ್ನಡೆಯನ್ನು ಕಂಡು 9,328.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಅಂಬುಜಾ ಸಿಮೆಂಟ್ಸ್‌, ಐಸಿಐಸಿಐ ಬ್ಯಾಂಕ್‌, ರಿಲಯನ್ಸ್‌, ಎಸಿಸಿ, ಎಸ್‌ಬಿಐ. 

Advertisement

Udayavani is now on Telegram. Click here to join our channel and stay updated with the latest news.

Next