Advertisement

ಮುಂಬಯಿ ಶೇರು 2ನೇ ದಿನವೂ ತೇಜಿ; 10,200 ದಾಟಿದ ನಿಫ್ಟಿ

04:34 PM Apr 03, 2018 | |

ಮುಂಬಯಿ : ನಿರಂತರ ಎರಡನೇ ದಿನ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಮುನ್ನಡೆ ಸಾಧಿಸಿರುವುದು ಹೂಡಿಕೆದಾರರಿಗೆ ಸಮಾಧಾನ ತಂದಿದೆ.

Advertisement

ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 115.27 ಅಂಕಗಳ ಮುನ್ನಡೆಯೊಂದಿಗೆ 33,402.94 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿನ್ನೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 286.68 ಅಂಕಗಳ ಏರಿಕೆಯನ್ನು ಸಾಧಿಸಿತ್ತು. 

ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟನ್ನು33.20 ಅಂಕಗಳ ಮುನ್ನಡೆಯೊಂದಿಗೆ 10,245.00 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು. 

ನಿನ್ನೆ ಸೋಮವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು  413.16 ಕೋಟಿ ರೂ.ಗಳ ಶೇರುಗಳನ್ನು ಖರೀದಿಸಿದ್ದವು. ಅದೇ ವೇಳೆ ಎಫ್ಪಿಐ ಹೂಡಿಕೆದಾರರು 689.75 ಕೋಟಿ ರೂ.ಗಳ ಶೇರುಗಳನ್ನು ಖರೀದಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next