ಮುಂಬಯಿ : ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡುವ ತಿಂಗಳ ಕೊನೇ ಗುರುವಾರವಾದ ಇಂದು ಮುಂಬಯಿ ಶೇರು ಪೇಟೆ ದಿನಾಂತ್ಯಕ್ಕೆ 25.36 ಅಂಕಗಳ ನಷ್ಟದೊಂದಿಗೆ 33,819.50 ಅಂಕಗಳ ಮಟ್ಟಕ್ಕೆ ಇಳಿಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 14.75 ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟನ್ನು 10,382.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು 2,884 ಶೇರುಗಳ ವಹಿವಾಟಿಗೆ ಒಳಪಟ್ಟವು; 1,020 ಶೇರುಗಳು ಮುನ್ನಡೆ ಸಾಧಿಸಿದವು; 1,703 ಶೇರುಗಳು ಹಿನ್ನಡೆಗೆ ಗುರಿಯಾದವು; 161 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು 34 ಪೈಸೆಗಳ ಕುಸಿತಕ್ಕೆ ಗುರಿಯಾಗಿ ಮೂರು ತಿಂಗಳ ಕನಿಷ್ಠವಾಗಿ 65.10 ರೂ. ಮಟ್ಟಕ್ಕೆ ಜಾರಿತು.
ಇಂದು ಫೆಬ್ರವರಿ ವಾಯಿದೆ ವಹಿವಾಟು ಚುಕ್ತಾ ಆಗುವುದರೊಂದಿಗೆ ಈ ತಿಂಗಳಲ್ಲಿ ಸೆನ್ಸೆಕ್ಸ್ 2,230.94 ಅಂಕಗಳ ನಷ್ಟಕ್ಕೆ ಗುರಿಯಾಗಿರುವುದು ದಾಖಲಾಯಿತು. ಇದೇ ರೀತಿ ನಿಫ್ಟಿ ಈ ತಿಂಗಳಲ್ಲಿ 686.95 ಅಂಕಗಳ ನಷ್ಟಕ್ಕೆ ಗುರಿಯಾಯಿತು.