Advertisement

3ನೇ ದಿನವೂ ಮುಂಬಯಿ ಶೇರು ಕುಸಿತ; ವಾಣಿಜ್ಯ ಕೊರತೆ ಗಂಭೀರ

04:43 PM Nov 15, 2017 | |

ಮುಂಬಯಿ : ನಿರಂತರ ಮೂರನೇ ದಿನವಾಗಿ ಇಂದು ಬುಧವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ 181 ಅಂಕಗಳ ಕುಸಿತವನ್ನು ಕಂಡಿದೆ; ದಿನಾಂತ್ಯದ ವಹಿವಾಟನ್ನು ಮೂರು ವಾರಗಳ ಕನಿಷ್ಠ ಮಟ್ಟದಲ್ಲಿ ಕೊನೆಗೊಳಿಸಿದೆ; ದೇಶದ ವಾಣಿಜ್ಯ ಕೊರತೆ ಬಹುತೇಕ ಮೂರು ವರ್ಷಗಳ ಎತ್ತರಕ್ಕೆ ತಲುಪಿರುವುದು ಶೇರು ಪೇಟೆಯ ಗಂಭೀರ ಚಿಂತೆಗೆ ಕಾರಣವಾಗಿದೆ.

Advertisement

ಸೆನ್ಸೆಕ್ಸ್‌ ಇಂದಿನ ವಹಿವಾಟನ್ನು 181.43 ಅಂಕಗಳ ನಷ್ಟದೊಂದಿಗೆ 32,944.94 ಅಂಕಗಳ ಮಟ್ಟಕ್ಕೆ ಕುಸಿದು ಕೊನೆಗೊಳಿಸಿತು. ಕಳೆದೆರಡು ದಿನಗಳಲ್ಲಿ ಸೆನ್ಸೆಕ್ಸ್‌ ಕಂಡ ಒಟ್ಟು ನಷ್ಟ 372.79 ಅಂಕ. 

ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 68.55 ಅಂಕಗಳ ನಷ್ಟದೊಂದಿಗೆ 10,188.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಏಶ್ಯನ್‌ ಶೇರು ಪೇಟೆಗಳಲ್ಲೂ ಇದೇ ರೀತಿಯ ನೇತ್ಯಾತ್ಮಕ ಸ್ಥಿತಿ ನೆಲೆಸಿದ್ದು ಕಚ್ಚಾ ತೈಲ ಬೆಲೆ ಏರುತ್ತಿರುವುದು ಶೇರು ಪೇಟೆಗೆ ಮಾರಕವೆಂದು ತಿಳಿಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next