ಮುಂಬಯಿ : ಏಶ್ಯನ್ ಶೇರು ಪೇಟಗಳಲ್ಲಿನ ದುರ್ಬಲ ಪ್ರವೃತ್ತಿಯನ್ನು ಅನುಸರಿಸಿ ಮಾರಾಟದ ಒತ್ತಡಕ್ಕೆ ಗುರಿಯಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಮೂರನೇ ದಿನ ಕುಸಿತದ ಹಾದಿಯಲ್ಲಿ ಸಾಗಿದ್ದು, ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 158 ಅಂಕಗಳ ನಷ್ಟಕ್ಕೆ ಗುರಿಯಾಗಿ 32,000 ಅಂಕಗಳ ಮಟ್ಟಕ್ಕಿಂತ ಕೆಳಗೆ ಕುಸಿಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,000ಕ್ಕಿಂತ ಕೆಳಮಟ್ಟದಲ್ಲೇ ವಹಿವಾಟನ್ನು ಆರಂಭಿಸಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 83.85 ಅಂಕಗಳ ನಷ್ಟದೊಂದಿಗೆ 31,930.34 ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಂಕ 22.10 ಅಂಕಗಳ ನಷ್ಟದೊಂದಿಗೆ 9,956.45 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಸನ್‌ಫಾರ್ಮಾ, ಹಿಂಡಾಲ್ಕೋ, ವೇದಾಂತ, ಟಾಟಾ ಮೋಟರ್, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಹಿಂಡಾಲ್ಕೋ, ವೇದಾಂತ, ಎನ್‌ಟಿಪಿಸಿ, ಬಿಪಿಸಿಎಲ್, ಪವರ್ ಗ್ರಿಡ್ ವಿಜೃಂಭಿಸಿದವು. ಟಾಪ್ ಲೂಸರ್‌ಗಳಾಗಿ ಅರಬಿಂದೋ ಫಾರ್ಮಾ, ಸನ್ ಫಾರ್ಮಾ, ಡಾ. ರೆಡ್ಡಿ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ (ಡಿ) ಶೇರುಗಳು ಹಿನ್ನಡೆಗೆ ಗುರಿಯಾದವು.