ಮುಂಬಯಿ : ಮುಂಬಯಿ ಶೇರು ಪೇಟೆ ನಿರಂತರ ಎರಡನೇ ದಿನವಾದ ಇಂದು ಬುಧವಾರ ಕೂಡ ತನ್ನ ವಹಿವಾಟನ್ನು ನಷ್ಟದೊಂದಿಗೆ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 151.95 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 33,218.81 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47 ಅಂಕಗಳ ನಷ್ಟದೊಂದಿಗೆ 10,303.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,037 ಶೇರುಗಳು ಮುನ್ನಡೆ ಸಾಧಿಸಿದವು; 1,711 ಶೇರುಗಳು ಹಿನ್ನಡೆಗೆ ಗುರಿಯಾದವು.
ಶೇ.3ರಷ್ಟು ಏರಿಕೆ ಕಂಡ ಎಕ್ಸಿಸ್ ಬ್ಯಾಂಕ್ ಟಾಪ್ ಗೇನರ್ ಎನಿಸಿತು. ಟಿಸಿಎಸ್ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು; ಎಸ್‌ಬಿಐ ಅತ್ಯಂತ ಕ್ರಿಯಾಶೀಲವಾಗಿತ್ತು. ವೇದಾಂತ, ಏರ್ ಟೆಲ್ ಟಾಪ್ ಲೂಸರ್ ಎನಿಸಿದವು.
ಭಾರ್ತಿ ಏರ್‌ಟೆಲ್ ಶೇರು ಶೇ.4ರಷ್ಟು ಕುಸಿಯಿತು. ಈ ಕಂಪೆನಿಯ ಮೂರು ಪ್ರಮುಖ ಹೂಡಿಕೆದಾರರು ತಮ್ಮ ಶೇರುಗಳನ್ನು ಇಂದು ಮಾರಾಟ ಮಾಡಿರುವುದೇ ಇದಕ್ಕೆ ಕಾರಣವಾಯಿತು.