Advertisement

ಮುಂಬಯಿ ಶೇರು ನಿರಂತರ 9ನೇ ದಿನವೂ ಕುಸಿತ: 146 ಅಂಕ ನಷ್ಟ

11:52 AM Feb 19, 2019 | udayavani editorial |

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆ ನಿರಂತರ ಒಂಬತ್ತನೇ ದಿನವೂ ಕುಸಿದಿದ್ದು ಇಂದು ಮಂಗಳವಾರದ ವಹಿವಾಟನ್ನು ಅದು 145.83 ಅಂಕಗಳ ನಷ್ಟದೊಂದಿಗೆ 35,352.61 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.60 ಅಂಕಗಳ ನಷ್ಟದೊಂದಿಗೆ 10,604.35 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ. 

ಇಂದಿನ ವಹಿವಾಟಿನಲ್ಲಿ ಶೇ.3.39ರ ಕುಸಿತವನ್ನು ಟಿಸಿಎಸ್‌ ಕಂಡಿತಾದರೆ ಇದನ್ನು ಅನುಸರಿಸಿ ಎನ್‌ಟಿಪಿಸಿ, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಇನ್‌ಫೋಸಿಸ್‌ ಶೇರುಗಳು ಕುಸಿದವು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,673 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,356 ಶೇರುಗಳು ಮುನ್ನಡೆ ಸಾಧಿಸಿದವು; 1,185 ಶೇರುಗಳು ಹಿನ್ನಡೆಗೆ ಗುರಿಯಾದವು; 132 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next