ಮುಂಬಯಿ : ದಿನಪೂರ್ತಿ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 22.32 ಅಂಕಗಳ ಮುನ್ನಡೆಯೊಂದಿಗೆ 35,622.14 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಈ ಮುನ್ನಡೆಗೆ ಐಟಿ ಮತ್ತು ಫಾರ್ಮಾ ವಲಯದ ಶೇರುಗಳು ಕಂಡ ಖರೀದಿಯೇ ಕಾರಣವಾಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 9.65 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 10,817.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ನಿರಂತರ ನಾಲ್ಕನೇ ವಾರವನ್ನು ಏರಿಕೆಯೊಂದಿಗೆ ಕೊನೆಗೊಳಿಸಿದೆ. ಈ ವಾರ ಸೆನ್ಸೆಕ್ಸ್ ಗಳಿಸಿರುವ ಅಂಕ 178.47; ನಿಫ್ಟಿ ಕಂಡಿರುವ ಏರಿಕೆ 50.05 ಅಂಕ.
ಇಂದಿನ ಟಾಪ್ ಗೇನರ್‌ಗಳು : ಸಿಪ್ಲಾ, ಡಾ. ರೆಡ್ಡಿ, ಇನ್‌ಫೋಸಿಸ್, ಟಿಸಿಎಸ್, ಯುಪಿಎಲ್. ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಹಿಂಡಾಲ್ಕೋ, ಅಲ್‌ಟ್ರಾ ಟೆಕ್ ಸಿಮೆಂಟ್, ಎಸ್ ಬ್ಯಾಂಕ್, ಎಸ್‌ಬಿಐ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,786 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,102 ಶೇರುಗಳು ಮುನ್ನಡೆ ಕಂಡವು; 1,534 ಶೇರುಗಳು ಹಿನ್ನಡೆಗೆ ಗುರಿಯಾದವು. 150 ಶೇರುಗಳು ಯಾವುದೇ ಬದಲಾವಣೆ ಕಾಣಲಲ್ಲ.