ಮುಂಬಯಿ: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಶೇ.0.25ರಷ್ಟು ತನ್ನ ಬಡ್ಡಿದರವನ್ನು ಏರಿಸಿದ್ದು ಅದರ ಬಿಸಿ ಮುಂಬಯಿ ಶೇರು ಮಾರುಕಟ್ಟೆಗೆ ಕೊನೆಗೂ ಮುಟ್ಟಿದೆ.
ಇಂದು ಗುರುವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆ 80.18 ಅಂಕಗಳ ನಷ್ಟದೊಂದಿಗೆ 31,075.73 ಅಂಕಗಳ ಮಟ್ಟದಲ್ಲಿ ಮತ್ತು ಮೂರು ವಾರಗಳ ಕನಿಷ್ಠ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.10 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,578.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಟಾಪ್ ಗೇನರ್‌ಗಳು : ಅರಬಿಂದೋ ಫಾರ್ಮಾ, ರಿಲಯನ್ಸ್, ವಿಪ್ರೋ, ಸಿಪ್ಲಾ, ಡಾ.ರೆಡ್ಡಿ. ಟಾಪ್ ಲೂಸರ್‌ಗಳು : ಬಿಪಿಸಿಎಲ್, ಭಾರ್ತಿ ಇನ್‌ಫ್ರಾಟೆಲ್, ಟಿಸಿಎಸ್, ಬ್ಯಾಂಕ್ ಆಫ್ ಬರೋಡ, ಹಿಂಡಾಲ್ಕೊ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳು 2,992. ಮುನ್ನಡೆ ಸಾಧಿಸದವುಗಳು 1,454; ಹಿನ್ನಡೆಗೆ ಗುರಿಯಾದವುಗಳು 1,354; ಬದಲಾಗದೆ ಉಳಿದವುಗಳು 184 ಶೇರುಗಳು.