Advertisement

ಏರಿದ ರೂಪಾಯಿ, ಇಳಿದ ತೈಲ ಬೆಲೆ: ಸೆನ್ಸೆಕ್ಸ್‌ 119 ಅಂಕ ಏರಿಕೆ

04:15 PM Nov 15, 2018 | |

ಮುಂಬಯಿ : ಡಾಲರ್‌ ಎದುರು ರೂಪಾಯಿ ತೋರಿರುವ ದೃಢತೆ, ಹೆಚ್ಚಿದ ವಿದೇಶಿ ಬಂಡವಾಳದ ಒಳ ಹರಿವು, ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು  118.55 ಅಂಕಗಳ ಮುನ್ನೆಯೊಂದಿಗೆ 35,145.75 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 40.40 ಅಂಕಗಳ ಮುನ್ನಡೆಯೊಂದಿಗೆ 10,616.70 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.

ಅಕ್ಟೋಬರ್‌ ಆರಂಭದಲ್ಲಿ  ಬ್ಯಾರಲ್‌ಗೆ 86 ಡಾಲರ್‌ ಇದ್ದ ಜಾಗತಿಕ ಕಚ್ಚಾ ತೈಲ ಬೆಲೆ ಶೇ.30ರ ಕುಸಿತವನ್ನು ಕಂಡು 65 ಡಾಲರ್‌ಗೆ ಇಳಿದಿರುವುದು ಭಾರತದ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಿದೆ.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,734 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,099 ಶೇರುಗಳು ಮುನ್ನಡೆ ಸಾಧಿಸಿದವು; 1,497 ಶೇರುಗಳು ಹಿನ್ನಡೆಗೆ ಗುರಿಯಾದವು; 138 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next