Advertisement

ಮುಂಬಯಿ ಶೇರು : ಆರಂಭಿಕ ವಹಿವಾಟಿನಲ್ಲಿ 85 ಅಂಕ ಕುಸಿತ

11:06 AM Nov 28, 2017 | |

ಮುಂಬಯಿ :  ಕಳೆದ ಎಂಟು ದಿನಗಳ ಗೆಲುವಿನ ಓಟದಲ್ಲಿ ಮುಂಬಯಿ ಶೇರು ದಾಖಲಿಸಿರುವ ಲಾಭವನ್ನು ನಗದೀಕರಿಸಲು ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂದಾದ ಪ್ರಯಕ್ತ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 85 ಅಂಕಗಳ ನಷ್ಟಕ್ಕೆ ಗುರಿಯಾಯಿತು.

Advertisement

ಪಿಎಸ್‌ಯು, ಮೆಟಲ್‌, ತೈಲ ಮತ್ತು ಅನಿಲ ಹಾಗೂ ಎಫ್ಎಂಸಿಜಿ ರಂಗದ ಶೇರುಗಳು ಇಂದು ಮಾರಾಟದ ಒತ್ತಡಕ್ಕೆ ಗುರಿಯಾಗಿ ಹಿನ್ನಡೆ ಕಂಡವು. 

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌ 29.15 ಅಂಕಗಳ ನಷ್ಟದೊಂದಿಗೆ 33,695.29 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,394.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಎಕ್ಸಿಸ್‌ ಬ್ಯಾಂಕ್‌, ಲಾರ್ಸನ್‌, ಐಟಿಸಿ, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.

ಟಾಪ್‌ ಗೇನರ್‌ಗಳು : ಇಂಡಸ್‌ ಇಂಡ್‌ ಬ್ಯಾಂಕ್‌, ಕೋಲ್‌ ಇಂಡಿಯಾ, ಝೀ ಎಂಟರ್‌ಟೇನ್‌ಮೆಂಟ್‌, ಯುಪಿಎಲ್‌, ಟಾಟಾ ಸ್ಟೀಲ್‌.

Advertisement

ಟಾಪ್‌ ಲೂಸರ್‌ಗಳು : ಒಎನ್‌ಜಿಸಿ, ಪವರ್‌ ಗ್ರಿಡ್‌ ಕಾರ್ಪ್‌, ಬಿಪಿಸಿಎಲ್‌, ಎನ್‌ಟಿಪಿಸಿ, ಎಚ್‌ಪಿಸಿಎಲ್‌.

Advertisement

Udayavani is now on Telegram. Click here to join our channel and stay updated with the latest news.

Next