ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿ ತೋರಿಬಂದ ಅಸ್ಥಿರ ವಾತಾವರಣಕ್ಕೆ ಅನುಗಣವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟನಲ್ಲಿ 57 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬ್ಯಾಂಕಿಂಗ್, ಟೆಲಿಕಾಂ, ಆಟೋ, ತೈಲ ಮತ್ತು ಅನಿಲ ಹಾಗೂ ಫಾರ್ಮಾ ಶೇರುಗಳು ಮಾರಾಟದ ಒತ್ತಡಕ್ಕೆ ಗುರಿಯಾದವು. ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 11.57 ಅಂಕಗಳ ಮುನ್ನಡೆಯನ್ನು ಸಂಪಾದಿಸಿ 33,262.50 ಅಂಕಳ ಮಟ್ಟಕ್ಕೆ ಏರಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ, 4.40 ಅಂಕಗಳ ಮುನ್ನಡೆಯನ್ನು ಸಂಪಾದಿಸಿ ದಿನದ ವಹಿವಾಟನ್ನು 10,313.40 ಅಂಕಗಳ ಮಟ್ಟಕ್ಕೆ ಏರಿತು. ಸೆನ್ಸೆಕ್ಸ್ 11.57 ಅಂಕಗಳ ಮುನ್ನಡೆಯನ್ನು ಗಳಿಸಿ 33,262.50 ಅಂಕಗಳ ಮಟ್ಟಕ್ಕೇರಿತು.
ಟಾಟಾ ಮೋಟರ್, ಅರಬಿಂದೋ ಫಾರ್ಮಾ, ಎಸ್‌ಬಿಐ, ಭಾರ್ತಿ ಏರ್‌ಟೆಲ್, ಲಾರ್ಸನ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು: ಲಾರ್ಸನ್,ಅಲ್‌ಟ್ರಾ ಟೆಕ್ ಸಿಮೆಂಟ್,ಗೇಲ್, ಎಸ್ ಬ್ಯಾಂಕ್, ಐಟಿಸಿ .
ಟಾಪ್ ಲೂಸರ್‌ಗಳು : ಅರಬಿಂದೋ ಫಾರ್ಮಾ, ಏಶ್ಯನ್ ಪೇಂಟ್ಸ್, ಟಾಟಾ ಮೋಟರ್, ಬಿಪಿಸಿಎಲ್, ಎಚ್‌ಪಿಸಿಎಲ್.