Advertisement

ಏಶ್ಯನ್‌ ಶೇರು ಪೇಟೆಯಲ್ಲಿ ದೌರ್ಬಲ್ಯ: ಸೆನ್ಸೆಕ್ಸ್‌ 185 ಅಂಕ ಕುಸಿತ

11:24 AM Dec 04, 2018 | |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿ, ತೈಲ ಬೆಲೆಯ ಮತ್ತೆ  ಏರುಗತಿ, ಡಾಲರ್‌ ಎದುರು ರೂಪಾಯಿ ದೌರ್ಬಲ್ಯ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಶೇರುಗಳ ಭಾರೀ ಮಾರಾಟ – ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಬೆಳಗ್ಗಿನ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

Advertisement

ಬೆಳಗ್ಗೆ 11.20ರ ಹೊತ್ತಿಗೆ ಸೆನ್ಸೆಕ್ಸ್‌ 184.28 ಅಂಕಗಳ ನಷ್ಟದೊಂದಿಗೆ 36,056.72 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 41.90 ಅಂಕಗಳ ನಷ್ಟದೊಂದಿಗೆ 10,841.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 9 ಪೈಸೆ ಕುಸಿತವನ್ನು ಕಂಡು 70.55 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಸ್‌ ಬ್ಯಾಂಕ್‌, ಸನ್‌ ಫಾರ್ಮಾ, ಎಚ್‌ ಡಿ ಎಫ್ ಸಿ, ಎಚ್‌ಯುಎಲ್‌, ಟಿಸಿಎಸ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next