Advertisement

ಫೆಡ್‌ ರೇಟ್‌ ಏರುವ ಭೀತಿ: ಸೆನ್ಸೆಕ್ಸ್‌ 79 ಅಂಕ ನಷ್ಟ,ನಿಫ್ಟಿ 10,585

04:19 PM Nov 09, 2018 | udayavani editorial |

ಮುಂಬಯಿ : ಏಶ್ಯನ್‌ ಶೇರು ಪೇಟೆಗಳಲ್ಲಿನ ಅಸ್ಥಿರತೆ, ಫೆಡ್‌ ರೇಟ್‌ ಏರುವ ಭೀತಿ, ಮುಂದುವರಿದಿರುವ ವಿದೇಶಿ ಬಂಡವಾಳದ ಹೊರ ಹರಿವು ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 79.13 ಅಂಕಗಳ ನಷ್ಟದೊಂದಿಗೆ 35,158.55 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 13.12 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,585.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇಂದು ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 35 ಪೈಸೆಯ ಚೇತರಿಕೆಯನ್ನು ಕಂಡು 72.65 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತಾದರೂ ಶೇರು ಮಾರುಕಟ್ಟೆ ಅದರಿಂದ ಉತ್ತೇಜನ ಪಡೆಯಲಿಲ್ಲ.

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,679 ಕಂಪೆನಿಗಳ ಶೇರುಗಳ ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,337 ಶೇರುಗಳು ಮುನ್ನಡೆ ಸಾಧಿಸಿದವು; 1,200 ಶೇರುಗಳು ಹಿನ್ನಡೆಗೆ ಗುರಿಯಾದವು; 142 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next