ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 95 ಅಂಕಗಳ ಏರಿಕೆಯನ್ನು ಕಂಡ ಹೊರತಾಗಿಯೂ ಜಾಗತಿಕ ಮಾರುಕಟ್ಟೆಗಳಲ್ಲಿನ ದೌರ್ಬಲ್ಯವನ್ನು ಅನುಲಕ್ಷಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಅನಂತರದಲ್ಲಿ ಕುಸಿತವನ್ನು ಕಂಡಿತು.
ಕಳೆದ ವಹಿವಾಟಿನಲ್ಲಿ 467.65 ಅಂಕಗಳ ನಷ್ಟವನ್ನು ಕಂಡಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ 57.77 ಅಂಕಗಳ ನಷ್ಟದೊಂದಿಗೆ 37,864.40 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10 ಅಂಕಗಳ ನಷ್ಟದೊಂದಿಗೆ 11,428.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬಜಾಜ್ ಫಿನಾನ್ಸ್ , ಎಕ್ಸಿಸ್ ಬ್ಯಾಂಕ್, ರಿಲಯನ್ಸ್, ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಬೆಳಗ್ಗಿನ ವಹಿವಾಟಿನಲ್ಲಿ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಚ್‌ಪಿಸಿಎಲ್, ಮಹೀಂದ್ರ, ಎಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಇನ್‌ಫೋಸಿಸ್; ಟಾಪ್ ಲೂಸರ್‌ಗಳು : ಐಟಿಸಿ, ಟೈಟಾನ್ ಕಂಪೆನಿ, ಭಾರ್ತಿ ಇನ್‌ಫ್ರಾಟೆಲ್,… ಯುಪಿಎಲ್, ಹೀರೋ ಮೋಟೋ ಕಾರ್ಪ್.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 15 ಪೈಸೆಗಳ ಚೇತರಿಕೆಯನ್ನು ಕಂಡು 72.30 ರೂ. ಮಟ್ಟಕ್ಕೆ ತಲುಪಿತು. ನಿನ್ನೆಯ ಸಾರ್ವಕಾಲಿಕ ತಳಮಟ್ಟವಾಗಿ ರೂಪಾಯಿ 72.67ರ ಮಟ್ಟಕ್ಕೆ ಕುಸಿದಿತ್ತು.