ಮುಂಬಯಿ : ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ಪ್ರದರ್ಶನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 188.98 ಅಂಕಗಳ ನಷ್ಟದೊಂದಿಗೆ 31,702.25 ಅಂಕಗಳ ಮಟ್ಟದಲ್ಲಿ ಆತಂಕಕಾರಿಯಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ 61.55 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,912.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜಾಗತಿಕ ರಾಜಕೀಯ ಅಸ್ಥಿರತೆ ಇದೇ ರೀತಿ ಮುಂದುವರಿದಲ್ಲಿ ಸೆನ್ಸೆಕ್ಸ್ ಸೂಚ್ಯಂಕ 30,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ, ನಿಫ್ಟಿ 9,400 ಅಂಕಗಳ ಮಟ್ಟಕ್ಕೆ ಇಳಿದೀತು ಎಂದು ವಿಶ್ಲೇಷಕರು ಹೇಳಿದ್ದಾರೆ.
ಕೋಲ್ ಇಂಡಿಯಾ, ಸನ್ ಫಾರ್ಮಾ, ಬಾಶ್, ಒಎನ್‌ಜಿಸಿ, ಪವರ್ ಗ್ರಿಡ್ ಶೇರುಗಳು ಇಂದಿನ ಟಾಪ್ ಗೇನರ್ ಎನಿಸಿಕೊಂಡವು.
ಅದಾನಿ ಪೋರ್ಟ್, ಎಸಿಸಿ, ಇನ್‌ಫೋಸಿಸ್, ಟಾಟಾ ಮೋಟರ್, ಟಾಟಾ ಪವರ್ ಶೇರುಗಳು ಟಾಪ್ ಲೂಸರ್ ಎನಿಸಿದವು.