Advertisement

ಮುಂಬಯಿ ಶೇರು 150 ಅಂಕ ಕುಸಿತ, ನಿಫ್ಟಿ 10,400ರ ಕೆಳಮಟ್ಟಕ್ಕೆ

10:55 AM Mar 14, 2018 | udayavani editorial |

ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ದೌರ್ಬಲ್ಯ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ನಷ್ಟಕ್ಕೆ ಗುರಿಯಾಯಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,400 ಅಂಕಗಳಿಗಿಂತ ಕೆಳಮಟ್ಟಕ್ಕೆ ಜಾರಿತು.

Advertisement

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತಮ್ಮ ವಿದೇಶ ಸಚಿವ ರೆಕ್ಸ್‌ ಟಿಲರ್‌ಸನ್‌ ಅವರನ್ನು  ವಜಾ ಮಾಡಿ ಅವರ ಹುದ್ದೆಗೆ ಸಿಐಎ ನಿರ್ದೇಶಕ ಮೈಕ್‌ ಪಾಂಪಿಯೋ ಅವರನ್ನು ನೇಮಿಸಿದ ಅನಿರೀಕ್ಷಿಸಿದ ವಿದ್ಯಮಾನಕ್ಕೆ ಅಮೆರಿಕನ್‌ ಶೇರು ಮಾರುಕಟ್ಟೆ ಕುಸಿತ ಕಂಡಿರುವುದನ್ನು ಅನುಸರಿಸಿ ಇಂದು ಏಶ್ಯನ್‌ ಶೇರು ಮಾರುಕಟ್ಟೆಗಳು ಕೂಡ ಕುಸಿತಕ್ಕೆ ಗುರಿಯಾದವು. 

ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್‌ 128.33 ಅಂಕಗಳ ನಷ್ಟದೊಂದಿಗೆ 33,728.45 ಅಂಕಗಳ ಮಟ್ಟದಲ್ಲೂ, ನಿಫ್ಟಿ 39.20 ಅಂಕಗಳ ನಷ್ಟದೊಂದಿಗೆ 10,387.70 ಅಂಕಗಳ ಮಟ್ಟದಲ್ಲೂ ವ್ಯವಹಾರನಿರತವಾಗಿದ್ದವು. 

ಟಿಸಿಎಸ್‌, ಎಸ್‌ಬಿಐ, ಟಾಟಾ ಸ್ಟೀಲ್‌, ವೇದಾಂತ, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಟೆಕ್‌ ಮಹೀಂದ್ರ, ಅಲ್‌ಟ್ರಾ ಟೆಕ್‌ ಸಿಮೆಂಟ್‌, ಅಂಬುಜಾ ಸಿಮೆಂಟ್‌, ಗೇಲ್‌ ಮತ್ತು ಎಚ್‌ ಸಿ ಎಲ್‌ ಟೆಕ್‌ ಶೇರುಗಳು ಟಾಪ್‌ ಗೇನರ್‌ ಎನಿಸಿದ್ದವು. 

Advertisement

ಭಾರ್ತಿ ಇನ್‌ಫ್ರಾಟೆಲ್‌, ಭಾರ್ತಿ ಏರ್‌ಟೆಲ್‌, ಅದಾನಿ ಪೋರ್ಟ್‌, ಎಸ್‌ಬಿಐ, ಬಿಪಿಸಿಎಲ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

ಡಾಲರ್‌ ಎದುರು ರೂಪಾಯಿ ವಿನಿಮಯ ದರ ಇಂದು ಬೆಳಗ್ಗಿನ ವಹಿವಾಟಿನಲ್ಲಿ 2 ಪೈಸೆಯಷ್ಟು ಚೇತರಿಸಿಕೊಂಡು 64.87 ರೂ. ಮಟ್ಟದಲ್ಲಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next