ಮುಂಬಯಿ : ಕಳೆದ ಐದು ದಿನಗಳಿಂದ ನಿರಂತರವಾಗಿ ಏರುಗತಿಯಲ್ಲಿ ಸಾಗಿ ಬಂದಿದ್ದ ಮುಂಬಯಿ ಶೇರು ಪೇಟೆಗೆ ಇಂದು ಮಂಗಳವಾರ ಬ್ರೇಕ್ ಬಿದ್ದಿದೆ.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 134.22 ಅಂಕಗಳ ನಷ್ಟದೊಂದಿಗೆ 36,444.64 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 39.10 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,922.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
2019 ಮತ್ತು 2020ರ ಜಾಗತಿಕ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಐಎಂಎಫ್ ಕಡಿಮೆ ಮಾಡಿರುವುದೇ ಜಾಗತಿಕ ಶೇರು ಪೇಟೆಗಳಲ್ಲಿ ಇಂದು ತೋರಿಬಂದಿರುವ ನಿಸ್ತೇಜಕ್ಕೆ ಕಾರಣವಾಗಿದೆ. ಕಳೆದ ಐದು ದಿನಗಳ ನಿರಂತರ ಲಾಭದ ಓಟದಲ್ಲಿ ಸೆನ್ಸೆಕ್ಸ್ 725 ಅಂಕಗಳನ್ನು ಸಂಪಾದಿಸಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,734 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 946 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,613 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 175 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.