Advertisement

ಮುಂಬಯಿ ಶೇರು 255 ಅಂಕ ಜಿಗಿತ,ದಾಖಲೆ ಎತ್ತರಕ್ಕೆ, ನಿಫ್ಟಿ ಮರಳಿ 9,600

04:53 PM Jun 19, 2017 | udayavani editorial |

ಮುಂಬಯಿ: ಬಹು ನಿರೀಕ್ಷೆಯ ಜಿಎಸ್‌ಟಿ ಗುರಿಯತ್ತ ಮುನ್ನುಗ್ಗುತ್ತಿರುವುದು ಹಾಗೂ ಆರ್‌ಬಿಐ ನಿರ್ದೇಶನದ ಪ್ರಕಾರ ಸೆಬಿ ಕಠಿನ ಹಣಕಾಸು ಸುಧಾರಣೆಗೆ ಮುಂದಾಗಿರುವುದು ಮುಂಬಯಿ ಶೇರು ಮಾರುಕಟ್ಟೆಯಲ್ಲಿ ನವೋಲ್ಲಾಸವನ್ನು ತುಂಬಿದೆ. ಹಾಗಾಗಿ ಇಂದು ಸೋಮವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 255 ಅಂಕಗಳ ಸೊಗಸಾದ ಏರಿಕೆಯೊಂದಿಗೆ 31,312 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 9,600 ಅಂಕಗಳ ಉನ್ನತ ಮಟ್ಟವನ್ನು ಪುನರ್‌ ಸಂಪಾದಿಸಿ ದಿನದ ವಹಿವಾಟನ್ನು 69.50 ಅಂಕಗಳ ಏರಿಕೆಯೊಂದಿಗೆ 9,657.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

ಇಂದಿನ ವಹಿವಾಟಿನಲ್ಲಿ ನಿಫ್ಟಿ ಬ್ಯಾಂಕ್‌ ಸೂಚ್ಯಂಕ 300ಕ್ಕೂ ಹೆಚ್ಚು ಅಂಕಗಳ ನೆಗತವನ್ನು ದಾಖಲಿಸಿ ಹೊಸ ತಾಜಾ ಎತ್ತರವಾಗಿ 23,806.65 ಅಂಕಗಳ ಮಟ್ಟವನ್ನು ತಲುಪಿರುವುದು. ಇಂದು ಎಕ್ಸಿಸ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಎಚ್‌ಡಿಎಫ್ಸಿ ಬ್ಯಾಂಕ್‌, ಐಸಿಐಸಿ ಬ್ಯಾಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಎಸ್‌ಬಿಐ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕ್‌ ಶೇರು ಉತ್ತಮ ಗಳಿಕೆಯನ್ನು ಸಾಧಿಸಿದವು. 

ಇಂದು 52 ವಾರಗಳ ಎತ್ತರವನ್ನು ಕಂಡ ಶೇರುಗಳೆಂದರೆ ಕ್ಯಾನ್‌ ಫಿನ್‌ ಹೋಮ್ಸ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಬಿಇಎಂಎಲ್‌, ಲಕ್ಸ್‌ ಇಂಡಸ್ಟ್ರೀಸ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಯುಪಿಎಲ್‌, ಕೋಲ್ಗೇಟ್‌ ಪಾಮೋಲಿವ್‌, ಮೋನ್‌ಸ್ಯಾಂಟೋ.

Advertisement

Udayavani is now on Telegram. Click here to join our channel and stay updated with the latest news.

Next