Advertisement

ಎಲ್ಲರಿಗೂ ನ್ಯಾಯ ಒದಗಿಸೋದು ನನ್ನ ಕರ್ತವ್ಯ: ಟೀಕಿಸುವವರಿಗೆ ಬಜೆಟ್‌ ಮೂಲಕ ಉತ್ತರಿಸುವೆ: BSY

08:02 PM Feb 13, 2021 | Team Udayavani |

ಮೈಸೂರು: “ಮೀಸಲಾತಿ ಕಲ್ಪಿಸುವಂತೆ ವಿವಿಧ ಸಮುದಾಯಗಳು ಹಾಗೂ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ. ಎಲ್ಲ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವ, ಪ್ರೀತಿ ಇದೆ. ಎಲ್ಲರಿಗೂ ನ್ಯಾಯ ಒದಗಿಸುವುದು ನನ್ನ ಕರ್ತವ್ಯ, ಜವಾಬ್ದಾರಿ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇಂತಹ ಸವಾಲುಗಳು ಹೊಸದಲ್ಲ. ಸವಾಲು ಬಂದಾಗ ನನಗೆ ಖುಷಿಯಾಗುತ್ತದೆ. ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇನೆ.

ಮೀಸಲಾತಿ ವಿಚಾರದಲ್ಲಿ ನಾನು ಏನನ್ನೂ ಮಾತನಾಡುವುದಿಲ್ಲ. ಎಲ್ಲ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವ, ಪ್ರೀತಿ ಇದೆ. ನ್ಯಾಯ ಕೇಳುವುದು ಪ್ರತಿಯೊಬ್ಬರ ಹಕ್ಕು, ಎಲ್ಲವನ್ನೂ ಪರಿಶೀಲಿಸಿ ನ್ಯಾಯಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಬಜೆಟ್‌ನಲ್ಲಿ ಉತ್ತರ ನೀಡುವೆ: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಿಂತಿಲ್ಲ. ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರ ಕೊಡಲ್ಲ. ಟೀಕಿಸುವವರಿಗೆ ಮುಂದಿನ ಬಜೆಟ್‌ ಮೂಲಕ ಉತ್ತರ ಕೊಡುತ್ತೇನೆ. ಮೈಸೂರಿಗೆ ಕೊಡುಗೆಗಳನ್ನು ನೀಡುವ ಕುರಿತು ಕಾದು ನೋಡಿ. ಬಜೆಟ್‌ ಸಿದ್ಧತಾ ಸಭೆಗಳು ಈಗಾಗಲೇ ಆರಂಭವಾಗಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸಚಿವರ ಜತೆ ಸಮಾಲೋಚಿಸುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಾಮೆಂಟ್ ಮಾಡಿದಾತನ ಮಾನ ಹರಾಜು ಹಾಕಿದ ನಟಿ ದೀಪಿಕಾ!  

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕರಾದ ಎಸ್‌.ಎ.ರಾಮದಾಸ್‌ ಮತ್ತಿತರರಿದ್ದರು.

Advertisement

ಹಣಕಾಸಿನ ಸ್ಥಿತಿ ನಡುವೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಬಜೆಟ್‌ ಮಂಡಿಸುವೆ. ಡಕೋಟಾ ಸರ್ಕಾರ ಎಂಬ ಮಾತನ್ನು ಹೇಳುತ್ತಿರುವ ವಿರೋಧ ಪಕ್ಷಗಳಿಗೆ ಉತ್ತರ ಸಿಗಲಿದೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಿಸುವ ಸಂಬಂಧ ಹೆಚ್ಚಿನ ಆದ್ಯತೆ ನೀಡುತ್ತೇನೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ಕೊಡಲಿದೆ.
– ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next