ಹೊಸದಿಲ್ಲಿ : ಕಳೆದ ಸೋಮವಾರದಿಂದ ಗುರುಗ್ರಾಮದ ಅತ್ಯಂತ ಐಶಾರಾಮಿ ಸೆವೆನ್ ಸ್ಟಾರ್ ಹೊಟೇಲ್‌ನಲ್ಲಿ ವಾಸ್ತವ್ಯ ಹಿಡಿದಿರುವ ಕರ್ನಾಟಕದ ಬಿಜೆಪಿ ಶಾಸಕರನ್ನು ಬೆಂಗಳೂರಿಗೆ ಮರಳುವಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಶನಿವಾರ ಆದೇಶಿಸಿದ್ದಾರೆ.
ಬಿಜೆಪಿ ಶಾಸಕರು ಕರ್ನಾಟಕದ ಆಳುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದಿಂದ ಖರೀದಿಗೆ ಒಳಪಡುವ ಭೀತಿಯಲ್ಲಿ ಗುರುಗ್ರಾಮದ ಅತ್ಯಂತ ಅದ್ದೂರಿಯ ಸೆವೆನ್ ಸ್ಟಾರ್ ಹೊಟೇಲಿನಲ್ಲಿ ಇರಿಸಲಾಗಿದೆ.
ಆದರೆ ಬಿಜೆಪಿ ಶಾಸಕರನ್ನು ಗುರುಗ್ರಾಮದ ಹೊಟೇಲಿನಲ್ಲಿ ಇರಿಸಿದ್ದು ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ರಣತಂತ್ರ ರೂಪಿಸುವ ಸಲುವಾಗಿಯೇ ಹೊರತು ಬೇರೆ ಯಾವುದೇ ಉದ್ದೇಶದಿಂದ ಅಲ್ಲ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ.
ಕಳೆದ ಮಂಗಳವಾರ ಯಡಿಯೂರಪ ಅವರು ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರಿಗೆ ಸಚಿವ ಪದ ಮತ್ತು ಹಣದ ಆಮಿಷ ಒಡ್ಡಿ ಅವರನ್ನು ಖರೀದಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕಳೆದ ಮಂಗಳವಾರ ಪಕ್ಷೇತರ ಶಾಸಕಾದ ಆರ್ ಶಂಕರ್ ಮತ್ತು ಎಚ್ ನಾಗೇಶ್ ಅವರು ಆಳುವ ಸಮ್ಮಿಶ್ರ ಸರಕಾರಕ್ಕೆ ತಮ್ಮ ಬೆಂಬಲವನ್ನು ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
224 ಸದಸ್ಯಬಲದ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 104 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದೆ. ಉಳಿದಂತೆ ಜೆಡಿಎಸ್ 37 ಮತ್ತು ಕಾಂಗ್ರೆಸ್ 80 ಸ್ಥಾನಗಳನ್ನು ಹೊಂದಿದೆ. ಬಹುಮತ ಸಂಖ್ಯೆಯು 113 ಆಗಿರುತ್ತದೆ.