Advertisement

ಬಿ.ಎಸ್.ವೈ ಪದತ್ಯಾಗ: ರಾಜೀನಾಮೆಗೆ ಕಾರಣ ಬಿಚ್ಚಿಡುವಂತೆ ಪಟ್ಟು ಹಿಡಿದ ಕಾಂಗ್ರೆಸ್

01:32 PM Jul 26, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿರುವ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಹಲವು ಬಗೆಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದ್ದು, ಪ್ರತಿಪಕ್ಷ ಕಾಂಗ್ರೆಸ್ ಕೆಲವು ಮೂಲಭೂತ ಪ್ರಶ್ನೆಗಳನ್ನು ಹಾಕಿದೆ.

Advertisement

ಸಿಎಂ ಬದಲಾವಣೆ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,  “ಯಡಿಯೂರಪ್ಪನವರೇ ಯಾವ ಕಾರಣಕ್ಕಾಗಿ ಕಣ್ಣೀರಿನೊಂದಿಗೆ ರಾಜೀನಾಮೆ ನೀಡಿದ್ದು ಎನ್ನುವುದನ್ನ ರಾಜ್ಯದ ಜನತೆಗೆ ತಿಳಿಸುವಿರಾ ? ನಿಮ್ಮ ರಾಜೀನಾಮೆ ಆಡಳಿತ ವೈಫಲ್ಯಕ್ಕಾಗಿಯೇ? ಒತ್ತಡಕ್ಕಾಗಿಯೇ? ಅಸಹಕಾರಕ್ಕಾಗಿಯೇ?

ಬೆದರಿಕೆಗಾಗಿಯೇ? ಇಲ್ಲವೆ ಬ್ಲಾಕ್‌ಮೇಲ್‌ಗಾಗಿಯೇ? ಎಂದಿರುವ ಕಾಂಗ್ರೆಸ್ ‘’ಸಮರ್ಪಕ ಆಡಳಿತ ನಡೆಸಲು ನಿಮಗೆ ಯೋಗ್ಯತೆ ಒದಗಿಬರುವುದು ಯಾವಾಗ ಹೇಳುವಿರಾ ಎಂದು ಪ್ರಶ್ನಿಸಿದೆ.

ಇನ್ನು ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು “ನಾಯಕತ್ವ ಬದಲಾವಣೆ” ಅಲ್ಲ “ಸರ್ಕಾರದ ಬದಲಾವಣೆ” ಎಂದು ಟೀಕಿಸಿರುವ ಕಾಂಗ್ರೆಸ್, ತಾಕತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿ.

ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ ಎಂದು ಕುಟುಕಿದೆ.

Advertisement

ಅವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ ‘ಪದಚ್ಯುತಿ’ ಮಾಡಿದ್ದೇಕೆ ?  ಇದು ‘ಪದತ್ಯಾಗ’ ಅಲ್ಲ, ‘ಪದಚ್ಯುತಿ’ ಎನ್ನುವುದನ್ನು ಕಣ್ಣೀರು ಹೇಳುತ್ತಿದ್ದವು ಎಂದಿದೆ ಕಾಂಗ್ರೆಸ್.

Advertisement

Udayavani is now on Telegram. Click here to join our channel and stay updated with the latest news.

Next