Advertisement

ವಧುಗಳ ಕನ್ಯತ್ವ ಪರೀಕ್ಷೆ ವಿರೋಧಿಸಿದ್ದಕ್ಕೆ ಥಳಿತ

06:15 AM Jan 24, 2018 | Team Udayavani |

ಪುಣೆ: ಮಹಿಳೆಯರ ವಿರುದ್ಧದ ಅನಿಷ್ಟ ಪದ್ಧತಿಯೊಂದರ ವಿರುದ್ಧ ಧ್ವನಿಯೆತ್ತಿದ ಮೂವರು ಯುವಕರಿಗೆ ಅವರದ್ದೇ ಸಮುದಾಯದ ಜನ ಥಳಿಸಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿಯಲ್ಲಿ ನಡೆದಿದೆ.

Advertisement

ಮದುವೆ ದಿನದ ರಾತ್ರಿಯಂದು ವಧುವಿನ ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿ ಕಂಜರ್‌ಭಾತ್‌ ಸಮುದಾಯದಲ್ಲಿ ಜಾರಿಯಲ್ಲಿದೆ. ಈ ಕೀಳು ಪದ್ಧತಿಯನ್ನು ಹೋಗಲಾಡಿಸುವ ಸಲುವಾಗಿ ಇದೇ ಸಮುದಾಯದ ಯುವಕರು “ಸ್ಟಾಪ್‌ ದ ವರ್ಜಿನಿಟಿ ರಿಚುವಲ್‌’ ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿದ್ದರು. ಇದು ಆ ಸಮುದಾಯದ ಆಕ್ರೋಶಕ್ಕೆ ಕಾರಣವಾಗ್ತಿತು. ಭಾನುವಾರ ರಾತ್ರಿ ತಮ್ಮ ಸಂಬಂಧಿಯೊಬ್ಬರ ಮದುವೆಗೆಂದು ಈ ಯುವಕರು ತೆರಳಿದ್ದರು. ಅವರನ್ನು ನೋಡಿದೊಡನೆ ಸುಮಾರು 40 ಜನರ ಗುಂಪು ತೀವ್ರ ಹಲ್ಲೆ ನಡೆಸಿದೆ. ಜತೆಗೆ, ಬೆದರಿಕೆಯನ್ನೂ ಹಾಕಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಮುದಾಯದ ಅನಿಷ್ಟ ಪದ್ಧತಿಯ ವಿರುದ್ಧ ಈ ಹಿಂದೆಯೂ ಯುವಕರು ಪೊಲೀಸರಿಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next