Advertisement
ಪತ್ನಿ ಭಾಗ್ಯಮ್ಮ (38), ಪುತ್ರಿ ನವ್ಯಾ (19) ಮತ್ತು ಪತ್ನಿಯ ಅಕ್ಕನ ಮಗಳಾದ ಹೇಮಾವತಿ (22) ಎಂಬ ಮೂವರನ್ನು ಆರೋಪಿ ಗಂಗರಾಜು ಕೊಲೆ ಮಾಡಿ, ಪೀಣ್ಯ ಠಾಣೆ ಪೊಲೀಸರಿಗೆ ಬಂದು ಶರಣಾಗಿದ್ದಾನೆ. ಮನೆಯಲ್ಲಿ ಕಳೆದ 3 ದಿನಗಳ ಹಿಂದೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಪೀಣ್ಯ ಪೊಲೀಸ್ ಠಾಣೆಗೆ ಭಾಗ್ಯಮ್ಮ ಅವರು ಗಲಾಟೆ ಸಂಬಂಧ ದೂರು ನೀಡಿದ್ದರು. ಗಲಾಟೆ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದೇ ಮೂವರ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.
Related Articles
Advertisement
ಮೃತದೇಹಗಳನ್ನು ಆಸ್ಪತೆಯ ಶವಾಗಾರದಲ್ಲಿ ಇಡಲಾಗಿದ್ದು, ಕುಟುಂಬದವರಿಗೂ ಮಾಹಿತಿ ನೀಡಲಾಗಿದೆ, ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅವರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಕಮಿಷನರ್ ವಿಕಾಸ್ ಕುಮಾರ್ ಹಾಗೂ ಉತ್ತರ ವಿಭಾಗದ ಡಿಜಿಪಿ ಸೈದುಲ್ ಅದಾವಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಸಂಜೆ 5 ಗಂಟೆ ನಂತರ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದ್ದು, ಆರೋಪಿಯ ವಿಚಾರಣೆ ಮುಂದುವರಿದೆ. ಒಂದೇ ಕೋಣೆಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಏನಿದು ಘಟನೆ?-ಜಾಲಹಳ್ಳಿಯಲ್ಲಿ ಕುಟುಂಬದ ಜತೆಗೆ ವಾಸವಿದ್ದ ಪತಿ
-ಹೆಬ್ಬಗೋಡಿಯಲ್ಲಿ ಹೋಮ್ಗಾರ್ಡ್ ಆಗಿದ್ದ ಆರೋಪಿ
-ದಂಪತಿ ನಡುವೆ ಗಲಾಟೆ ಬಗ್ಗೆ ಠಾಣೆಗೆ ದೂರು ನೀಡಿದ್ದ ಪತ್ನಿ
-ಇದರಿಂದ ಸಿಟ್ಟಿಗೆದ್ದು ಮನೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿ
-ಒಂದೇ ಮನೆಯಲ್ಲಿ ರಕ್ತಸಿಕ್ತ ಮೂರು ಮೃತದೇಹಗಳು ಪತ್ತೆ
-ರುಂಡ ಮುಂಡ ಬೇರ್ಪಡಿಸುವಂತೆ ಬರ್ಬರವಾಗಿ ಹತ್ಯೆ
-ಬಳಿಕ ಪೊಲೀಸ್ ಠಾಣೆಗೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿ