Advertisement

ಬಿಆರ್‌ಟಿಎಸ್‌ನ ಅಂದ ಹೆಚ್ಚಿಸಿದ ಕಲಾಕೃತಿಗಳು

07:51 PM Oct 07, 2021 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯದ ಬಹು ನಿರೀಕ್ಷಿತ ಹು-ಧಾ ತ್ವರಿತ ಬಸ್‌ ಸಂಚಾರ ಸೇವೆ (ಎಚ್‌ಡಿಬಿಆರ್‌ಟಿಎಸ್‌)ಮಾರ್ಗದ ಕೆಲವೆಡೆ ಫ್ಲೋರಲ್‌ ಪೇಂಟ್‌ ಮತ್ತು ಫನೇಚರ್‌ ಫಿಲ್ಮ್ ಚಿತ್ರಿಸಲಾದ ಸುಂದರ ರಮಣೀಯ ಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ. ಸುಮಂಗಲಾ ಭಟ್‌ ಅವರ ಸೃಷ್ಟಿ ಆರ್ಟ್ಸ್ನವರ ಕೈಚಳಕದಲ್ಲಿ ನಿಸರ್ಗ ರಮಣೀಯ ದೃಶ್ಯಗಳು ಮತ್ತು ತಾಯಿ ಮಡಲಲ್ಲಿನ ಮಗು ಹಾಗೂ ಕಲಾಕೃತಿಗಳು ಜನರನ್ನು ತಮ್ಮತ್ತ ಸೆಳೆಯುತ್ತಿವೆ.

Advertisement

ಸೃಷ್ಟಿ ಆರ್ಟ್ಸ್ನವರು ನವನಗರ-ಅಮರಗೋಳ ಮಧ್ಯದ ಬಿಆರ್‌ಟಿಎಸ್‌ ಮೇಲ್ಸೇತುವೆ ಕೆಳಗೆ ಫಿಲ್ಲರ್‌ನಲ್ಲಿ ಪ್ಲೋರಲ್‌ ಪೇಂಟ್‌ನಲ್ಲಿ ನಿಸರ್ಗ ರಮಣೀಯ ಚಿತ್ರ ಬಿಡಿಸಿದ್ದು, ಇದು ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಧಾರವಾಡ ಲ್ಯಾಪಿಟೇಶನ್‌ ರೂಮ್‌ನಲ್ಲಿ ತಾಯಿ ಮಗುವನ್ನು ತನ್ನ ಮಡಲಿನಲ್ಲಿ ಆಲಂಗಿಸಿ ಕುಳಿತ ಚಿತ್ರ ಮನಮೋಹಕವಾಗಿದೆ. ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣ ಬಳಿ ಬಿಆರ್‌ಟಿಎಸ್‌ನ ಕೇಂದ್ರ ಕಚೇರಿ ಆವರಣದಲ್ಲಿನ ಫಿಲ್ಲರ್‌ಗಳ ಕಂಬಕ್ಕೆ ಫ್ಲೋರಲ್‌ ಪೇಂಟ್‌ನಿಂದ ಆಕರ್ಷಕ ಚಿತ್ರ ಬಿಡಿಸಲಾಗಿದೆ.

ಈ ಚಿತ್ರಗಳು ಬಿಆರ್‌ಟಿಎಸ್‌ನ ಅಂದ ಹೆಚ್ಚಿಸಿದೆ. ಅಲ್ಲದೆ ಜನರನ್ನು ತಮ್ಮತ್ತ ಕೈಬೀಸಿ ಕರೆಯುವಂತಿವೆ. ಸೃಷ್ಟಿ ಆರ್ಟ್ಸ್ನವರು ಬಿಆರ್‌ಟಿಎಸ್‌ನ ಕಚೇರಿ, ರೂಮ್‌ ಮತ್ತು ಮಾರ್ಗಗಳಲ್ಲಿ ಫ್ಲೋರಲ್‌ ಪೇಂಟ್‌, ಫನೇಚರ್‌ ಫಿಲ್ಮ್ ಚಿತ್ರಿಸಿದ್ದಲ್ಲದೆ ಧಾರವಾಡ ರೈಲ್ವೆ ನಿಲ್ದಾಣದಲ್ಲೂ ಯಕ್ಷಗಾನ, ಭರತನಾಟ್ಯ, ಜ್ಞಾನಪೀಠ ಪ್ರಶಸ್ತಿ ವಿಜೇತರು ಸೇರಿದಂತೆ ವಿಭಿನ್ನ ಕಲಾಕೃತಿಗಳನ್ನು ರಚಿಸಿ ನಿಲ್ದಾಣದ ಅಂದ ಹೆಚ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next