Advertisement
ಕೆ.ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಅಧಿಕಾರದಲ್ಲಿರುವ ತೆಲಂಗಾಣದಲ್ಲಿ ಕಾಂಗ್ರೆಸ್ 5-6 ತಿಂಗಳು ಮೊದಲೇ ಸಿದ್ಧತೆ ಶುರು ಮಾಡಿದೆ. ಆಡಳಿತಾರೂಢ ಬಿಆರ್‌ಎಸ್‌ನಿಂದಲೂ ಕೆಲವು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಜತೆಗೆ ಬಿಜೆಪಿಯ ಕೆಲವು ಮುಖಂಡರೂ ಕಾಂಗ್ರೆಸ್‌ನತ್ತ ಬರಲು ಮನಸ್ಸು ಮಾಡುವ ಸಾಧ್ಯತೆಗಳಿವೆ.
ಹೇಗಾದರೂ ಮಾಡಿ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಏರಬೇಕು ಎಂಬ ಗುರಿಯಲ್ಲಿರುವ ಕಾಂಗ್ರೆಸ್, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮೂಲಕ ಭರ್ಜರಿ ಪ್ರಚಾರ ಆರಂಭಿಸಿದೆ. ಇನ್ನು ಜೂ.27ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಬಿಜೆಪಿ ಪರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಉಚಿತ ಕೊಡುಗೆಗಳನ್ನು ಪ್ರಕಟಿಸುವ ಉತ್ಸಾಹವೂ ಜೋರಾಗಿಯೇ ಇದೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಲಾಡ್ಲಿ ಬೆಹೆನಾ ಯೋಜನೆ ಜಾರಿಗೊಳಿಸಿದೆ. ಮುಂದಿನ ಚುನಾವಣೆಗಾಗಿ ಲಾಡ್ಲಿ ಲಕ್ಷ್ಮೀ ಯೋಜನೆ 0.2 ಎಂದು ಪರಿಷ್ಕರಿಸಿ ಜಾರಿಗೊಳಿಸುವ ವಾಗ್ಧಾನ ಮಾಡಿದೆ. ರೈತರಿಗಾಗಿ “ಕಿಸಾನ್ ಸಮ್ಮಾನ್ ಯೋಜನೆ’ ವ್ಯಾಪ್ತಿಯಲ್ಲಿ ರೈತರಿಗೆ ವಾರ್ಷಿಕವಾಗಿ 2 ಸಾವಿರ ರೂ. ನೀಡುವ, ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದೆ.
Related Articles
Advertisement
ರಾಜಸ್ಥಾನದಲ್ಲಿ ಮಹಿಳೆಯರಿಗೆ ಮೊಬೈಲ್:ಆಂತರಿಕ ಭಿನ್ನಮತದಿಂದ ಕಂಗೆಟ್ಟಿರುವ ರಾಜಸ್ಥಾನದಲ್ಲಿ ಅಶೋಕ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ ಉಚಿತ ಮೊಬೈಲ್ ನೀಡುವ ವಾಗ್ಧಾನ ಮಾಡಿದೆ. ಜತೆಗೆ ಮೂರು ವರ್ಷಗಳ ಉಚಿತ ಇಂಟರ್‌ನೆಟ್ ಅನ್ನೂ ನೀಡುವ ಭರವಸೆ ನೀಡಿದೆ. ಅಧಿಕಾರಿಗಳ ಪ್ರಕಾರ 1.33 ಕೋಟಿ ಮಂದಿ ಮಹಿಳೆಯರಿಗೆ ಮೊಬೈಲ್ ಯೋಜನೆ ನೆರವಾಗಲಿದೆಯಂತೆ. ಈ ಬಗ್ಗೆ ಬಿಜೆಪಿ ಯಾವ ರೀತಿ ತಿರುಗೇಟು ನೀಡಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ