ಹೀಗೆ ನಗುಮೊಗದಲ್ಲೇ ಹೇಳುತ್ತಾ ಹೋದರು ನಿರ್ದೇಶಕ ಪಿ.ಎನ್.ಸತ್ಯ. ಅವರು ಹೇಳಿಕೊಂಡಿದ್ದು “ಬೆಂಗಳೂರು ಅಂಡರ್‌ವರ್ಲ್ಡ್’ ಸಿನಿಮಾ ಬಗ್ಗೆ. ಚಿತ್ರ ಸಕ್ಸಸ್ ಆಗಿದೆ. ಆ ಖುಷಿ ಹಂಚಿಕೊಳ್ಳಲೆಂದೇ ಸತ್ಯ ಮತ್ತು ತಂಡ ಪತ್ರಕರ್ತರ ಮುಂದೆ ಬಂದು ಕುಳಿತಿತ್ತು. ಮೊದಲು ಮೈಕ್ ಹಿಡಿದು ಮಾತಿಗೆ ಮುಂದಾಗಿದ್ದು ಸತ್ಯ. “ಈ ಚಿತ್ರದ ಟೈಟಲ್ ಇಟ್ಟು ಶುರುಮಾಡಿದಾಗಿನಿಂದಲೂ ಎಲ್ಲೋ ಒಂದು ಕಡೆ ಸಣ್ಣ ನಂಬಿಕೆ ಇತ್ತು. ಆದರೆ, ಈಗ ಜನ ಮೆಚ್ಚಿಕೊಂಡಿರುವುದನ್ನು ಗಮನಿಸಿದರೆ, ಇದು ನನ್ನ ನಿರೀಕ್ಷೆ ಮೀರಿ ಖುಷಿಕೊಟ್ಟಿದೆ. ಮಾಮೂಲೀ ಶೈಲಿ ಬಿಟ್ಟು ಬೇರೆ ಶೇಡ್‌ನಲ್ಲಿ ಈ ಚಿತ್ರ ಮಾಡಿದ್ದೆ. ನನ್ನ ಮತ್ತು ನನ್ನ ತಂಡದ ಶ್ರಮಕ್ಕೆ ಫಲ ಸಿಕ್ಕಿದೆ. ಈ ಮಟ್ಟಕ್ಕೆ ಸಿನಿಮಾ ರೀಚ್ ಆಗಲು ಮಾಧ್ಯಮ ಕಾರಣ. ಒಳ್ಳೆಯ ವಿಮರ್ಶೆಗಳು ಬಂದಿದ್ದರಿಂದಲೇ ಜನ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ನನ್ನೊಬ್ಬನಿಂದ ಸಿನಿಮಾ ಯಶಸ್ಸು ಕಂಡಿಲ್ಲ. ನನ್ನ ತಂತ್ರಜ್ಞರು, ಕಲಾವಿದರು, ನಿರ್ಮಾಪಕರ ಸಹಕಾರ, ಪ್ರೋತ್ಸಾಹದಿಂದ ಈ ಯಶಸ್ಸು ಸಿಕ್ಕಿದೆ. ಆದಿತ್ಯ ಅವರಿಗೆ ಕಥೆ ಹೇಳಿದಾಗಿನಿಂದಲೂ ಬೆನ್ನೆಲುಬಾಗಿ ನಿಂತರು. ಒಳ್ಳೇ ತಂಡ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಇಂತಹ ಸಕ್ಸಸ್ ನಿರೀಕ್ಷಿಸಲು ಸಾಧ್ಯ’ ಎಂದರು ಸತ್ಯ.
Advertisement
ಆದಿತ್ಯ ಅವರಿಗೆ ಸಿನಿಮಾ ಮೇಲೆ ಮೊದಲೇ ನಂಬಿಕೆ ಇತ್ತಂತೆ. “ಸತ್ಯ ಅವರ ಕಾಂಬಿನೇಷನ್‌ನ ಮೊದಲ ಚಿತ್ರವಾದ್ದರಿಂದ, ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಿದ್ದರು. ಸಿನಿಮಾ ನೋಡಿದವರೆಲ್ಲರೂ, ನಟನೆ, ಮೇಕಿಂಗ್, ಕಥೆ ಹಾಗೂ ಕಂಟೆಂಟ್ ಬಗ್ಗೆ ಮಾತಾಡುತ್ತಿದ್ದಾರೆ. ಈ ರೀತಿಯ ಚಿತ್ರಗಳಿಗೆ ಎಲ್ಲೆಡೆ ಪ್ರಶಂಸೆ ಸಿಕ್ಕಿದ್ದು ನೋಡಿ ಖುಷಿಯಾಗಿದೆ. ಮೆಚ್ಚುಗೆಯಲ್ಲೂ, ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಸಿನಿಮಾಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಮೊದಲು ಮಾಧ್ಯಮ ಕೊಟ್ಟ ಪ್ರೋತ್ಸಾಹದಿಂದಲೇ ಚಿತ್ರಕ್ಕೆ ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದೇ ಪ್ರೋತ್ಸಾಹ ಮುಂದೆಯೂ ಇರಲಿ’ ಎಂದರು ಆದಿತ್ಯ.
Related Articles
Advertisement