Advertisement
ತಮ್ಮನ ಮೊದಲ ಚಿತ್ರದ ಫೋಟೋಶೂಟ್‌ನಲ್ಲಿ ಸಾಥ್ ನೀಡಲು, ನೈತಿಕ ಬೆಂಬಲ ನೀಡಲು, ಹೆದರಬೇಡ ಧೈರ್ಯವಾಗಿ ಮಾಡು ಎನ್ನಲು ವಿಕ್ರಮ್ ಸಹೋದರ, ಮನೋರಂಜನ್ ಕೂಡಾ ಸೆಟ್‌ನಲ್ಲೇ ಇದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಇಬ್ಬರು ಮಕ್ಕಳು ಒಂದೇ ಸೆಟ್‌ನಲ್ಲಿ ಒಟ್ಟಿಗೆ ಮಾತನಾಡಿದ್ದಾರೆ. ಈ ಅಣ್ತಮ್ಮನ ಚಿಟ್‌ಚಾಟ್ ಇಲ್ಲಿದೆ …
ಡ್ರೀಮ್ ಕಮ್ ಟ್ರೂ ಅಂತಾರಲ್ಲ, ಆ ತರಹದ ಖುಷಿಯಲ್ಲಿದ್ದೇನೆ ನಾನು. ಚಿಕ್ಕ ವಯಸ್ಸಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ. ಈಗ ಆ ದಿನ ಕೂಡಿ ಬಂದಿದೆ. ಪ್ರತಿ ಕಲಾವಿದರ ಜೀವನದಲ್ಲೂ ಹೀರೋ ಆಗಿ ಲಾಂಚ್ ಆಗುವ ಮೊದಲ ಸಿನಿಮಾ ತುಂಬಾ ಮಹತ್ವದ್ದಾಗಿರುತ್ತದೆ. ನಾನು ಕೂಡಾ ಅದೇ ಕುತೂಹಲ, ಉತ್ಸಾಹದಿಂದಿದ್ದೇನೆ. * ನೀವು ಟೆಕ್ನಿಷಿಯನ್ ಆಗುತ್ತೀರಿ ಎಂಬ ಮಾತು ಕೇಳಿಬರುತ್ತಿತ್ತಲ್ಲ?
ನನಗೆ ಟೆಕ್ನಿಕಲಿ ತುಂಬಾ ಇಂಟರೆಸ್ಟ್ ಇತ್ತು. ಈಗಲೂ ಇದೆ. ಆದರೆ, ಆರಂಭದಿಂದಲೂ ನನಗೆ ಹೀರೋ ಆಗುವ ಆಸೆ ಇತ್ತು. ಆ ನಂತರ ಟೆಕ್ನಿಷಿಯನ್. ಒಂದು ಹಂತದಲ್ಲಿ ನಾನೇ ಸಿನಿಮಾ ನಿರ್ದೇಶನ ಮಾಡಿ, ಹೀರೋ ಆಗಿ ನಟಿಸಬೇಕೆಂದುಕೊಂಡಿದ್ದೆ. ಆ ಸಮಯದಲ್ಲಿ ಈ ಆಫರ್ ಬಂತು. ಒಳ್ಳೆಯ ಕಥೆ, ತಂಡವನ್ನು ಮಿಸ್ ಮಾಡಿಕೊಳ್ಳಬಾರದೆಂಬ ಕಾರಣಕ್ಕೆ ಒಪ್ಪಿಕೊಂಡೆ. ಮುಂದಿನ ದಿನಗಳಲ್ಲಿ ನಿರ್ದೇಶನ ಮಾಡೋ ಆಸೆಯೂ ಇದೆ.
Related Articles
ಖಂಡಿತಾ ಅಲ್ಲ, ಆಫರ್ ಬಂದ ನಂತರ ಎರಡ್ಮೂರು ಸಿಟ್ಟಿಂಗ್ ಆಗಿ ಪ್ಲ್ರಾನ್ ಮಾಡಿದ ನಂತರ ಈ ಸಿನಿಮಾ ಮಾಡಲು ನಿರ್ಧರಿಸಿದ್ದು. ಒಳ್ಳೆಯ ಬ್ಯಾನರ್, ಒಳ್ಳೆಯ ಕಥೆ, ಒಳ್ಳೆಯ ನಿರ್ದೇಶಕ. ಒಬ್ಬ ನ್ಯೂ ಕಮ್ಮರ್‌ನ ಸಿನಿಮಾಕ್ಕೆ ಇವೆಲ್ಲವೂ ಕೂಡಿ ಬಂದಾಗ ಮಿಸ್ ಮಾಡಿದರೆ ಅದನ್ನು ನಾವು ಮಾಡಿದ ಬಹುದೊಡ್ಡ ತಪ್ಪಾಗುತ್ತದೆ. ಅದಕ್ಕೆ ಖುಷಿಯಿಂದ ಒಪ್ಪಿಕೊಂಡೆ.
Advertisement
* ಆರಂಭದಲ್ಲಿ ಕಥೆ ಕೇಳಿದ್ದು, ನೀವಾ, ನಿಮ್ಮ ತಂದೆನಾ?ಶುರುವಿಗೆ ನಾನೇ ಕಥೆ ಕೇಳಿದೆ. ಕಥೆ ಇಷ್ಟವಾಗಿ ಸಿನಿಮಾ ಮಾಡಲು ಡಿಸೈಡ್ ಮಾಡಿದೆ. ಆ ನಂತರ ನಾನೇ ಡ್ಯಾಡಿಗೆ ಕಥೆ ಹೇಳಿದೆ. ನಿನಗೆ ಇಷ್ಟವಾದರೆ ಮಾಡು, ನಿನ್ನ ಜೊತೆ ನಾನಿರುತ್ತೇನೆ ಎಂದರು. * ಕಥೆ ತುಂಬಾ ಕಾಡಿತಾ?
ಕಥೆ ಹಾಂಟ್ ಮಾಡಿದ್ದಕ್ಕಿಂತ ಹೆಚ್ಚಾಗಿ ಡೈರೆಕ್ಟರ್ ಅವರು ಹಾಂಟ್ ಮಾಡಿಸಿದರು. ಒಬ್ಬ ಹೊಸಬನಿಗೆ ಏನು ಬೇಕೋ ಆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿವೆ. ರವಿಚಂದ್ರನ್ ಅವರ ಮಗ ಅಂದಾಗ ಜನ ಏನು ನಿರೀಕ್ಷಿಸ್ತಾರೋ ಅದು ಕೂಡಾ ಈ ಸಿನಿಮಾದಲ್ಲಿದೆ. ಜೊತೆಗೆ ನನ್ನ ಲುಕ್, ಮ್ಯಾನರೀಸಂಗೆ ಏನು ಬೇಕೋ ಅವೆಲ್ಲವೂ ಈ ಸಿನಿಮಾದಲ್ಲಿವೆ. * ನಿಮ್ಮ ತಯಾರಿ ಹೇಗಿದೆ?
ಡ್ಯಾನ್ಸ್, ಫೈಟ್ ಕಲಿಯುತ್ತಿದ್ದೇನೆ. ಜೊತೆಗೆ ಡ್ರಾಮಾ ಕೂಡಾ ನಡೀತಾ ಇದೆ. ಚಿತ್ರದ ಫಸ್ಟ್‌ಹಾಫ್ನಲ್ಲಿ ಬೈಕ್ ರೇಸರ್ ಗೆಟಪ್ ಬರುತ್ತದೆ. ಅದಕ್ಕೆ ಬೈಕ್ ರೈಡಿಂಗ್ ಕೂಡಾ ಕಲಿಯಬೇಕು. ನಾನು ತುಂಬಾ ಬೈಕ್ ರೈಡಿಂಗ್ ಮಾಡೋದಿಲ್ಲ. ಈಗ ಬೈಕ್ ರೈಡಿಂಗ್ ಕಲಿಯುತ್ತಿದ್ದೇನೆ. ಅದು ರೇಸರ್ ಶೈಲಿಯಲ್ಲಿ. * ಅಪ್ಪನ ನಿರ್ದೇಶನದಲ್ಲಿ ಲಾಂಚ್ ಆಗಬೇಕೆಂಬ ಆಸೆ ಇತ್ತಾ?
ಈಗಾಗಲೇ ಅವರ ಸಿನಿಮಾದಲ್ಲಿ ನಟಿಸಿದ್ದೇನೆ. ಮುಂದೆಯೂ ನಟಿಸಬಹುದು. ಕೇವಲ ನಿರ್ದೇಶನವಷ್ಟೇ ಅಲ್ಲ, ಅವರ ಜೊತೆಗೂ ನಟಿಸಬಹುದು. ಬೇರೆ ಟೀಂ ಜೊತೆ ವರ್ಕ್ ಮಾಡೋದನ್ನು ಕಲಿತುಕೊಂಡರೆ, ಅಪ್ಪನ ಜೊತೆ ಇನ್ನೂ ಸುಲಭವಾಗಿ ಕೆಲಸ ಮಾಡಬಹುದು. * ನಿಮ್ಮ ಅಣ್ಣನೂ ಹೀರೋ ಆಗಿದ್ದಾರೆ. ಈಗ ಜೊತೆಗೆ ಇದ್ದಾರೆ?
ಅಣ್ಣ ನನ್ನ ಬೆನ್ನೆಲು ಎನ್ನಬಹುದು. ಜೊತೆಗೆ ಇರ್ತಾರೆ. ಬ್ರದರ್ ಅನ್ನೋದಕ್ಕಿಂತ ನನ್ನ ಗುರು. * ಮುಂದೆ ಯಾವ ಜಾನರ್‌ನಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತೀರಿ?
ಯಾವುದೇ ಜಾನರ್‌ಗೆ ಅಂಟಿಕೊಳ್ಳದೇ, ಒಳ್ಳೆಯ ಕಮರ್ಷಿಯಲ್ ಸಿನಿಮಾ ಮಾಡುವ ಆಸೆ ಇದೆ. ನಿರ್ದೇಶಕರ ಕಲ್ಪನೆಗೆ ಜೀವ ತುಂಬುತ್ತಾ, ನಿರ್ದೇಶಕರ ನಟ ಅಗಲು ಇಷ್ಟ.