ಬೆಂಗಳೂರು: ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತ ದಲ್ಲಿ ಸಹೋದರರು ಮೃತಪಟ್ಟಿರುವ ಘಟನೆ ಹೆಬ್ಟಾಳ ಸಂಚಾರ ಠಾಣೆ ವ್ಯಾಪ್ತಿಯ ಹೊರ ವರ್ತುಲ ರಸ್ತೆಯ ದೇವಿ ನಗರ ಬಸ್ ನಿಲ್ದಾಣದ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ದೊಡ್ಡಬೊಮ್ಮಸಂದ್ರದ ನಾಗರಾಜ್ (30) ಮತ್ತು ಆತನ ಚಿಕ್ಕಮ್ಮನ ಮಗ ರಾಜೇಶ್ ಕುಮಾರ್ (27) ಮೃತ ದುರ್ದೈವಿಗಳು.
ನಾಗರಾಜ್ ತಮ್ಮ ಬೈಕ್‌ನಲ್ಲಿ ರಾಜೇಶ್‌ಕುಮಾರ್ ಅವರನ್ನು ನಾಗರಬಾವಿಯಲ್ಲಿನ ಮನೆಗೆ ಡ್ರಾಪ್ ಮಾಡಲು ಹೋಗುತ್ತಿದ್ದರು. ಈ ವೇಳೆ ದುರ್ಘ ಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಾಗರಾಜ್, ಸಹೋದರ ರಾಜೇಶ್ ಕುಮಾರ್‌ನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಲೊಟ್ಟೆಗೊಲ್ಲಹಳ್ಳಿ ಕಡೆಯಿಂದ ಹೆಬ್ಟಾಳ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ದೇವಿನಗರ ಕ್ರಾಸ್‌ನ ಬಸ್ ನಿಲ್ದಾಣದ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾರೆ. ನಂತರ ಅಡ್ಡಾದಿಡ್ಡಿ ಚಲಿಸಿದ ಬೈಕ್, ರಸ್ತೆ ವಿಭಜಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಗರಾಜ್ ಮತ್ತು ರಾಜೇಶ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿ ದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಅಪಘಾತದ ಸಂದರ್ಭದಲ್ಲಿ ಇಬ್ಬರೂ ಹೆಲ್ಮೆಟ್ ಧರಿಸಿದ್ದರು. ಆದರೆ, ಅಪಘಾತದ ತೀವ್ರತೆಗೆ ಹೆಲ್ಮೆಟ್ ಗಳು ನಜ್ಜುಗುಜ್ಜಾಗಿ ತಲೆಗೆ ಪೆಟ್ಟು ಬಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರ ಪೈಕಿ ಒಬ್ಬರ ಬಳಿ ಚಾಕು ಪತ್ತೆ ಮೃತರ ಪೈಕಿ ಒಬ್ಬರ ಬಳಿ ಚಾಕು ಪತ್ತೆಯಾಗಿದ್ದು, ಯಾವ ಉದ್ದೇಶಕ್ಕಾಗಿ ಕೊಂಡೊಯ್ಯುತ್ತಿ ದ್ದರು ಎಂಬುದು ತನಿಖೆ ನಡೆಸಬೇಕಿದೆ. ನಾಗರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪದವೀಧರರಾದ ರಾಜೇಶ್ ಕುಮಾರ್, ಉದ್ಯೋಗದ ಹುಡುಕಾಟ ದಲ್ಲಿದ್ದರು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಹೆಬ್ಟಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.