Advertisement

37 ಲಕ್ಷ ರೂ. ನಿಷೇಧಿತ ನೋಟು ವಶ: ಸಹೋದರರಿಬ್ಬರು ಅರೆಸ್ಟ್‌

03:22 PM Mar 11, 2017 | udayavani editorial |

ಶ್ರೀನಗರ : 37 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಿಷೇಧಿತ ನೋಟುಗಳನ್ನು ಹೊಂದಿದ್ದ ಸಹೋದರರಿಬ್ಬರನ್ನು ಪೊಲೀಸರು ಜಮ್ಮು ಕಾಶ್ಮೀರದ ಬಡಗಾಂವ್‌ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

Advertisement

ಇಂದು ಮಝಾಮಾ ಸ್ಟೇಶನ್‌ನಲ್ಲಿ ರೈಲ್ವೇ ಪೊಲೀಸರು ಬಂಡೀಪುರ ಜಿಲ್ಲೆಯ ಸಂಭಾಲ್‌ ನಿವಾಸಿ ಸಹೋದರರಾದ ಫಾರೂಕ್‌ ಅಹ್ಮದ್‌ ಲಾಬ್ರೂ ಮತ್ತು ಮೊಹಮ್ಮದ್‌ ಶಫೀ ಅವರನ್ನು ಬಂಧಿಸಿದರು. 

ಈ ಸಹೋದರರ ಬಳಿ ಇದ್ದ ನಿಷೇಧಿತ 500 ರೂ.ಮೌಲ್ಯದ 32.70 ಲಕ್ಷ ರೂ. ಮೌಲ್ಯದ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡರು. ಇವರಿಬ್ಬರನ್ನೂ ಈಗ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next