ಕೋಲ್ಕತಾ: ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 23 ರನ್‌ಗಳಿಂದ ಜಯ ಸಾಧಿಸಿದೆ, ಇದು ಈ ಸಾಲಿನ ಎರಡನೇ ಗೆಲುವಾಗಿದೆ.
ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸನ್ ರೈಸರ್ಸ್ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಅವರು ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಪ್ರಸಕ್ತ ಐಪಿಎಲ್ ಋತುವಿನ ಮೊದಲ ಶತಕವಾಗಿದೆ.
ಇಂಗ್ಲೆಂಡ್ ಮೂಲದ ಆಟಗಾರ ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 3 ಸಿಕ್ಸರ್ ಮತ್ತು ಅಮೋಘ 12 ಬೌಂಡರಿ ಗಳೊಂದಿಗೆ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಅಮೋಘ ಶತಕದ ನೆರವಿನಿಂದ ತಂಡ 4 ವಿಕೆಟ್ ನಷ್ಟಕ್ಕೆ 228 ರನ್ ಕಲೆ ಹಾಕಿ ಭರ್ಜರಿ ಮೊತ್ತವನ್ನು ಕೆಕೆಆರ್ ಮುಂದಿಟ್ಟಿತು. ಮಯಾಂಕ್ ಅಗರ್ವಾಲ್ 9, ರಾಹುಲ್ ತ್ರಿಪಾಠಿ 9, ನಾಯಕ ಐಡೆನ್ ಮಾರ್ಕ್ರಾಮ್ 50 ರನ್ ಗಳಿಸಿ ಔಟಾದರು. ಅಭಿಷೇಕ್ ಶರ್ಮಾ 32 ರನ್ ಕೊಡುಗೆ ಸಲ್ಲಿಸಿದರು. ಹೆನ್ರಿಚ್ ಕ್ಲಾಸೆನ್ ಔಟಾಗದೆ 16 ರನ್ ಗಳಿಸಿದರು.
ಗುರು ಬೆನ್ನಟ್ಟಿದ ಕೋಲ್ಕತಾ ಪ್ರತಿ ಓವರ್‌ಗೆ 11 ಪ್ಲಸ್ ರನ್-ರೇಟ್ ಕಾಯ್ದುಕೊಳ್ಳುವುದು ಕಷ್ಟಕರವಾಗಿತ್ತು ಆದರೆ ನಾಯಕ ನಿತೀಶ್ ರಾಣಾ (41 ಎಸೆತಗಳಲ್ಲಿ 75) ಆರು ಸಿಕ್ಸರ್‌ಗಳೊಂದಿಗೆ SRH ಬೌಲರ್‌ಗಳಿಗೆ ಸವಾಲಾದರು. ರಿಂಕು ಸಿಂಗ್ (31 ಎಸೆತಗಳಲ್ಲಿ ಔಟಾಗದೆ 58) 6.2 ಓವರ್‌ಗಳಲ್ಲಿ 69 ರನ್‌ಗಳ ಜೊತೆಯಾಟ ನೀಡಿದರು. ಕೆ ಕೆಆರ್ ಮೊದಲ 10 ಓವರ್‌ಗಳಲ್ಲಿ 5 ವಿಕೆಟ್‌ಗೆ 96 ರನ್ ಗಳಿಸಿದ ನಂತರ ಭರ್ಜರಿ ಆಟವಾಡಿದರು.
ಟಿ ನಟರಾಜನ್ ರಾಣಾ ಅವರನ್ನು ಪೆವಿಲಿಯನ್ ಗೆ ಕಳುಹಿಸಿದಾಗ, ಕೊನೆಯ ಮೂರು ಓವರ್‌ಗಳಲ್ಲಿ 57 ರನ್‌ಗಳ ಅಗತ್ಯವಿತ್ತು.
ಆದರೆ ಭುವನೇಶ್ವರ್ ಕುಮಾರ್ (4 ಓವರ್‌ಗಳಲ್ಲಿ 1/29) 18ನೇ ಓವರ್‌ನಲ್ಲಿ 10 ರನ್ ನೀಡಿದರೆ, ನಟರಾಜನ್ (4 ಓವರ್‌ಗಳಲ್ಲಿ 1/54) ಅಂತಿಮ ಓವರ್‌ನಲ್ಲಿ 16 ರನ್ ನೀಡಿದರು. ರಿಂಕು ಸಿಂಗ್ ಔಟಾಗದೆ 58 ರನ್ ಗಳಿಸಿದರು.7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಶಕ್ತವಾಯಿತು.