Advertisement

ಪ್ಯಾರಾ ಲಿಫ್ಟರ್‌ ಸಚಿನ್‌ ಚೌಧರಿಗೆ ಕಂಚು

06:00 AM Apr 11, 2018 | |

ಹೊಸದಿಲ್ಲಿ: ಭಾರತದ ಪ್ಯಾರಾ ಲಿಫ್ಟರ್‌ ಸಚಿನ್‌ ಚೌಧರಿ ಗೇಮ್ಸ್‌ನ ಪುರುಷರ ಹೆವಿವೇಟ್‌ ಫೈನಲ್‌ನಲ್ಲಿ  ಕಂಚಿನ ಪದಕ ಜಯಿಸಿದ್ದಾರೆ. 10 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ ಅವರು ಒಟ್ಟಾರೆ 181 ಕೆ.ಜಿ. ಎತ್ತುವ ಮೂಲಕ ಕಂಚು ಪಡೆದಿದ್ದಾರೆ. ಇದು ದೇಶದ ಪ್ಯಾರಾ ಆ್ಯತ್ಲೆಟಿಕ್‌ ತಂಡಕ್ಕೆ ಲಭಿಸಿದ ಮೊದಲ ಪದಕವಾಗಿದೆ. ಈ ವಿಭಾಗ ದಲ್ಲಿ ನೈಜೀರಿಯಾದ ಅಬ್ದುಲಾಝೀಝ್ ಇಬ್ರಾಹಿಂ ಚಿನ್ನ ಗೆದ್ದರೆ ಮಲೇಶ್ಯದ ಯಿ ಖೀಯಿ ಜಾಂಗ್‌ ಕಂಚು ಪಡೆದಿದ್ದಾರೆ.

Advertisement

35ರ ಹರೆಯದ ಚೌಧರಿ ಕಳೆದ ವರ್ಷ ದುಬೈಯಲ್ಲಿ ನಡೆದ ವಿಶ್ವಕಪ್‌ ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ಅವರು ಜೀವನಶ್ರೇಷ್ಠ 200 ಕೆ.ಜಿ. ಎತ್ತಿ ಈ ಸಾಧನೆ ಮಾಡಿದ್ದಾರೆ. 2012ರ ಸಮ್ಮರ್‌ ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು 9ನೇ ಸ್ಥಾನ ಪಡೆದಿದ್ದರು. 

ಭಾರತದ ಮೂವರು ಪುರುಷ ಪವರ್‌ಲಿಫ್ಟರ್‌ಗಳು ಫೈನಲ್‌ ಸುತ್ತಿಗೆ ಪ್ರವೇಶ ಪಡೆದಿದ್ದರು. ಆದರೆ ಸಚಿನ್‌ ಮಾತ್ರ ಪದಕ ಗೆಲ್ಲಲು ಯಶಸ್ವಿಯಾಗಿದ್ದರು. ಇನ್ನಿಬ್ಬರು ಲಿಫ್ಟರ್‌ಗಳಾದ ಫ‌ರ್ಮಾನ್‌ ಬಾಶ್‌ ಮತ್ತು ಅಶೋಕ್‌ ಕುಮಾರ್‌ ಅವರು ಲೈಟ್‌ವೇಟ್‌ ಫೈನಲ್‌ನಲ್ಲಿ ಅನುಕ್ರಮವಾಗಿ 5 ಮತ್ತು 11ನೇ ಸ್ಥಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next