Advertisement

ಯಕ್ಷಗಾನ ಇತಿಹಾಸ ತೆರೆದಿಟ್ಟ ಕರಪತ್ರ!

03:23 PM Dec 10, 2018 | |

ಹೊನ್ನಾವರ: 61ವರ್ಷಗಳ ಹಿಂದಿನ ಕತೆ. ಇಡಗುಂಜಿ ಮಹಾಗಣಪತಿ ಪ್ರಸಾದಿತ ಯಕ್ಷಗಾನ ಮಂಡಳಿ ಕೆರೆಮನೆ ಇವರು ಕುಮಟಾ ರಮಣ ಮುದ್ರಣಾಲಯದಲ್ಲಿ ಮುದ್ರಿಸಿದ ಈ ಕರಪತ್ರ ಯಕ್ಷಗಾನಕ್ಕೆ ಸಂಬಂಧಿ ಸಿದ ಹಲವು ಕತೆಗಳನ್ನು ತೆರೆದಿಡುತ್ತದೆ.

Advertisement

15-3-1957ನೇ ಶುಕ್ರವಾರ ರಾತ್ರಿ ಸಿದ್ದಾಪುರ ತಾಲೂಕು ಕಾನಸೂರಿನ ಗಿರಣಿಬಯಲಿನಲ್ಲಿ ಕಟ್ಟಿಸಿದ ಭವ್ಯ ತಂಬುವಿನಲ್ಲಿ ಆಟ. ಪ್ರಸಂಗ ಹಿಡಂಬಾ ವಿವಾಹ ಮತ್ತು ಬೇಡರ ಕಣ್ಣಪ್ಪ. ಈ ಆಖ್ಯಾನದಲ್ಲಿ ಅಭಿನಯಿಸುವವರು… ಎಂದು ಹೇಳಿದೆ. ಈಗ ಒಬ್ಬ ಕಲಾವಿದ ಎರಡು ಪಾತ್ರ ಮಾಡಿದರೆ ಹಣದ ಆಸೆಗೆ ಮಾಡಿದ ಎಂದು ಟೀಕಿಸುತ್ತಾರೆ. ಆಕರ್ಷಣೆಗಾಗಿ ಮತ್ತು ಕಲಾವಿದನ ಸಾಮರ್ಥ್ಯ ಪ್ರದರ್ಶನಕ್ಕೆ ಎರಡು ಪಾತ್ರ ಮಾಡುವ ಸಂಪ್ರದಾಯ ಅಂದೂ ಇತ್ತು. ಕೆರೆಮನೆ ಶಿವರಾಮ ಹೆಗಡೆ ಹಿಡಂಬಾ ವಿವಾಹದಲ್ಲಿ ಭೀಮನಾಗಿ ಮತ್ತು ಬೇಡರ ಕಣ್ಣಪ್ಪದಲ್ಲಿ ಹಾಸ್ಯಪಾತ್ರ ಕೈಲಾಸ ಶಾಸ್ತ್ರಿಯಾಗಿ ಅಭಿನಯಿಸಿದ್ದರು.

ಪ್ರಸಿದ್ಧ ಕಲಾವಿದರನ್ನು ಅತಿಥಿಯಾಗಿ ಕರೆಸಿಕೊಂಡರೆ ಈಗ ಮೇಳದ ಕಲಾವಿದರಲ್ಲಿ ಅಸಮಾಧಾನ ಇರುತ್ತದೆ. ಆಗ ಮೇಳದ ಯಾಜಿ ಭಾಗÌತ್‌ ಮತ್ತು ಮಾರ್ವಿ ನಾರಾಯಣ ಭಾಗÌತರು ವಿಶೇಷ ಆಕರ್ಷಣೆಯಾಗಿದ್ದರು. ಸ್ಪೇಷಲ್‌ ಆಗಿ ಬಹುಜನ ನೋಡಬೇಕು ಎಂದು ಅಪೇಕ್ಷಿಸುವ ಪ್ರಖ್ಯಾತ ಹಾಸ್ಯಗಾರ ಸಾಲಿಗ್ರಾಮ ಮಂಜುನಾಥಯ್ಯ ಅವರನ್ನು ಕರೆಸಲಾಗಿದೆ ಎಂದು ಕರಪತ್ರ ಹೇಳಿದ್ದು, ಹಾಸ್ಯಗಾರ ಮಂಜುನಾಥಯ್ಯನವರ ಕುಮಾರಿ ಪಂಡರಿಬಾಯಿ ಇವಳನ್ನು ಡ್ಯಾನ್ಸ್‌ ಮಾಡಲು ಕರೆಸಲಾಗಿದೆ. ಈ ಸುಸಂಧಿ  ಕಳೆದುಕೊಳ್ಳಬೇಡಿ ಎಂದು ಕರಪತ್ರ ಹೇಳಿದೆ. ಇಂದು ವಿಶೇಷ ಆಕರ್ಷಣೆ ಟೀಕೆಗೊಳಗಾಗುತ್ತದೆ.

ಅಪರೂಪದ ಈ ಕರಪತ್ರ ಫೇಸ್‌ ಬುಕ್‌ನಲ್ಲಿ ಪ್ರಕಟಿಸಿದಾಗ ಆಗಲೂ ಡ್ಯಾನ್ಸ್‌ ಇತ್ತು ಎಂದು ಕಡತೋಕಾ ಸೂರಣ್ಣ ಈಗಿನ ಟೀಕೆಗೆ ಉತ್ತರಿಸಿದ್ದಾರೆ. ಅದ್ಭುತ ದಾಖಲೆ ಎಂದು ಕೆರೆಮನೆ ಶಿವಾನಂದ ಹೇಳಿದ್ದಾರೆ. ಅಮೆರಿಕದಿಂದ ಆನಂದ ಹಾಸ್ಯಗಾರ ಮೆಚ್ಚುಗೆ ವ್ಯಕ್ತಮಾಡಿ ಕೆರೆಮನೆ ಶಿವರಾಮ ಹೆಗಡೆ ಆ ಕಾಲದಲ್ಲಿ ಎರಡು ವೇಷ ಮಾಡಿದ್ದು, ಕಲೆಗಾಗಿ ಹಿಂದಿನ ಮುಖ್ಯ ಕಲಾವಿದರು ಕೋಡಂಗಿಯಿಂದ ಆರಂಭಿಸಿ ಮುಖ್ಯವೇಷ, ಸಣ್ಣವೇಷಗಳನ್ನು ಮಾಡಿ ಆಕರ್ಷಣೆ ಉಳಿಸಿದ್ದರು ಎಂದು ಹೇಳಿದ್ದಾರೆ.

ಅಂದು ಟಿಕೆಟ್‌ ದರ ಕುರ್ಚಿ 2ರೂ. ಬೇಂಚ್‌ 1ರೂ. ಚಾಪೆ ಎಂಟಾಣೆ, ನೆಲ ಆರಾಣೆ ಇತ್ತು. ಹೆಚ್ಚು ಪ್ರೇಕ್ಷಕರು ಬಂದರೆ ಎಂದು ಸಮಯಾನುಸಾರ ಟಿಕೆಟ್‌ ದರದಲ್ಲಿ ಹೆಚ್ಚು ಕಡಿಮೆ ಮಾಡಲಾಗುವುದು ಎಂದು ಹೇಳಲಾಗಿದೆ. ಈಗ ಗೌರವ ಪ್ರವೇಶ ಎಂದು ಕವರ್‌ ಕೊಟ್ಟು ಹಣ ಪಡೆದುಕೊಂಡು, ಟಿಕೆಟ್‌ ದರ ಪಸ್ಟ್‌ ಕ್ಲಾಸ್‌ 500ರೂ. ಇಟ್ಟು ಅರ್ಧ ಸಭಾಗೃಹದ ನಂತರ ಕೂರಿಸುವುದು ಮಾಮೂಲಾಗಿದೆ. ಹಿಲಾಲು ಬೆಳಕಿನಲ್ಲಿ ಬಯಲು ಚಪ್ಪರದಲ್ಲಿ ನಡೆಯುತ್ತಿದ್ದ ಆಟ ತಂಬುವಿಗೆ ಬದಲಾಗಿ ಝಗಝಗಿಸುವ ಗ್ಯಾಸ್‌ ಲೈಟ್‌ ದೀಪ, ನಂತರ ಜನರೇಟರ್‌ನಿಂದ ಬೆಳಗುವ ವಿದ್ಯುತ್‌ ದೀಪ, ಹಲವು ಹತ್ತು ಮೇಳಗಳ ಸ್ಪರ್ಧೆ, ದೇವಾಲಯದ ಆಶ್ರಯ, ಒಂದು ಕಲಾವಿದ ಒಂದೇ ಮೇಳಕ್ಕೆ ಬೆಳ ತನಕ ಆಟ ಎಂಬುದೆಲ್ಲಾ ಬದಲಾಗುತ್ತಾ ಅರ್ಧಶತಮಾನದ ಹಿಂದಿನ ಸಂಪ್ರದಾಯ ಹೆಸರು ಬದಲಾವಣೆಯೊಂದಿಗೆ ಪುನಃ ಚಾಲ್ತಿಯಲ್ಲಿದೆ. ಪರಿವರ್ತನೆ ಜಗದ ನಿಯಮ ಎಂಬುದಕ್ಕೆ ಸಾಕ್ಷಿಯಾಗಿದೆ.

Advertisement

ಜೀಯು, ಹೊನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next