Advertisement

ತಲೆಗೆ ಸೂಜಿಯಿಂದ ಚುಚ್ಚಿದಂತಾಗುತ್ತದೆ; ನೋವು ತೋಡಿಕೊಂಡ ಪಾಪ್‌ ತಾರೆ

06:54 PM Nov 08, 2022 | Team Udayavani |

ತಾವು ಗುಣಪಡಿಸಲಾಗದಂಥ ನರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಪಾಪ್‌ ತಾರೆ ಬ್ರಿಟ್ನಿ ಸ್ಪಿಯರ್ಸ್‌ ಬಹಿರಂಗಪಡಿಸಿದ್ದಾರೆ.

Advertisement

ನನ್ನ ದೇಹದ ಬಲ ಭಾಗದ ನರಕ್ಕೆ ಹಾನಿಯಾಗಿದ್ದು, ಇಡೀ ದೇಹವೇ ಮರಗಟ್ಟಿದ ಅನುಭವವಾಗುತ್ತದೆ. ಕುತ್ತಿಗೆ ಹಾಗೂ ತಲೆಯ ಮಧ್ಯಭಾಗಕ್ಕೆ ಸೂಜಿಯಿಂದ ಚುಚ್ಚಿದಂತಾಗುತ್ತದೆ.

ಉಸಿರಾಡಲೂ ಕಷ್ಟವಾಗುತ್ತದೆ. ನಿದ್ರೆ ಬರದೇ ಒದ್ದಾಡುತ್ತೇನೆ. ಈ ರೋಗಕ್ಕೆ ಮದ್ದಿಲ್ಲ. ಆದರೆ, ಡಾನ್ಸ್‌ ಮಾಡುವುದರಿಂದ ಸ್ವಲ್ಪ ರಿಲೀಫ್ ಸಿಗುತ್ತಿದೆ ಎಂದು ಬ್ರಿಟ್ನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗದೇ ಇರುವುದೇ ಸಮಸ್ಯೆಗೆ ಕಾರಣ ಎಂದೂ ಹೇಳಿದ್ದಾರೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next