Advertisement
ಬೇರೆ ಯಾವುದೋ ತಿಂಗಳಿನ ಬೆಳಿಗ್ಗೆ ಅಥವಾ ಮಧ್ಯಾಹ್ನ ಆಗಿದ್ದರೆ ವಾಹನಗಳಿಂದ ತುಂಬಿರುವ ರಸ್ತೆಗಳು ಸದ್ಯಕ್ಕೆ ಆಗಸ್ಟ್ ಬಂತೆಂದು ನಿರಾಳವಾಗಿ ನಿಟ್ಟುಸಿರು ಬಿಡುತ್ತವೆ. ಆಗಸ್ಟ್ ತಿಂಗಳೆಂದರೆ ಇಲ್ಲಿ ಬೇಸಿಗೆ ರಜೆ, ಮತ್ತೆ ರಜೆಯನ್ನು ರಜೆ ಎಂದೇ ಗಂಭೀರವಾಗಿ ತೆಗೆದುಕೊಳ್ಳುವ ಜನರು ತಮ್ಮ ಸಂಸಾರ¨ªೋ ಸ್ನೇಹಿತರಧ್ದೋ ಜೊತೆಗೆ ಅಥವಾ ಒಂಟಿಯಾಗಿಯೋ ತಮ್ಮ ಊರು ಅಥವಾ ದೇಶ ಬಿಟ್ಟು ಇನ್ನೆÇÉೋ ತಿರುಗಾಡಲು ಹೋಗಿ¨ªಾರೆ. ಮಕ್ಕಳನ್ನು ದಿನಾ ಬೆಳಿಗ್ಗೆ ಅವಸರದಲ್ಲಿ ಶಾಲೆ ಮುಟ್ಟಿಸುವವರು ಮಧ್ಯಾಹ್ನ ಮನೆಗೆ ಕರೆದುಕೊಂಡು ಬರುವವರು ಓಡಾಟದ ಪಾಳಿ ತಪ್ಪಿತೆಂದು ಆರಾಮಾಗಿ¨ªಾರೆ ಈ ಬೇಸಿಗೆಯಲ್ಲಿ.
Related Articles
Advertisement
ಬ್ರಿಟಿಶರು ತಮ್ಮ ಬೇಸಿಗೆಯನ್ನು ಬರಿಯ ಕಾಲವಾಗಿ, ಮಾಸವಾಗಿ ಪರಿಗಣಿಸದೆ ಅದನ್ನೊಂದು ಮನೋಧರ್ಮವಾಗಿ ಸ್ವೀಕರಿಸುತ್ತಾರೆ. ಕೆಲವು ವ್ಯಕ್ತಿಗಳ ವರ್ತನೆ ಅಥವಾ ಚಿತ್ತಸ್ಥಿತಿ ನೋಡಿ ಇವರು ಬ್ರಿಟಿಶ್ ಬೇಸಿಗೆಯ ಹಾಗೆ ಎಂದು ಹೋಲಿಸುವ ಪದ್ಧತಿಯೂ ಇಲ್ಲಿದೆ. ಕೆಲವು ಘಟನೆಗಳು ನಡೆದ ರೀತಿ ನೋಡಿ ಇದು ಬ್ರಿಟಿಶ್ ಸಮ್ಮರಿನಂತೆ ಇದೆಯಲ್ಲ ಎಂದು ಉದ್ಗರಿಸುವುದೂ ಇದೆ. ಬ್ರಿಸ್ಟಲ್ ಮತ್ತು ಪಕ್ಕದ ಬಾತ್ ನಗರಗಳ ನಡುವೆ ಏವನ್ ಎಂಬ ನದಿ ಹರಿಯುತ್ತದೆ. ಅದು ಬಾತ್‌ನ ಹತ್ತಿರದಲ್ಲಿ ಕೆಲವೊಮ್ಮೆ ಸಣ್ಣ ಮಳೆ ಬಂದರೂ ಉಕ್ಕಿಹರಿಯುವುದು. “ಯಾವಾಗ ಗಾಳಿ ಬರುತ್ತದೆ, ಸುಳಿ ಕಾಣಿಸಿಕೊಳ್ಳುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ’ ಎಂದು ದೋಣಿಯಲ್ಲಿ ಪ್ರಯಾಣಿಸುವವನೊಬ್ಬ ಉಳಿದ ಪ್ರಯಾಣಿಕರನ್ನು ಕುತೂಹಲದಲ್ಲಿಡುವುದಕ್ಕಾಗಿ ಉದ್ಗರಿಸುತ್ತಾನೆ. ನನ್ನಲ್ಲಿ ಮೆಲ್ಲನೆ, “ಈ ನದಿ ಬ್ರಿಟಿಶ್ ಬೇಸಿಗೆಯಂತೆ’ ಎಂದು ಹೇಳಿ ಕುತೂಹಲವನ್ನು ಹೆಚ್ಚಿಸುತ್ತಾನೆ. ಕೆಲವು ಮನುಷ್ಯರ ಚರ್ಯೆಯನ್ನು ತಿಳಿದವರಿಗೆ “ಬ್ರಿಟಿಶ್ ಬೇಸಿಗೆ’ ಅಂದರೆ ಹೀಗೆ ಅಂತ ತಿಳಿಯುತ್ತದೆ. ಯಾರೋ ಒಬ್ಬ ಮನುಷ್ಯನನ್ನು ನೋಡಿ, “ಆತ ಬ್ರಿಟಿಷ್ ಬೇಸಿಗೆಯನ್ನು ಹೋಲುತ್ತಾನೆ’ ಅಂತ ಅನ್ನಿಸುವುದೂ ಇದೆ. ಗಳಿಗೆಗಳಿಗೆಗೆ ಸ್ವಭಾವ ಬದಲಿಸಬಲ್ಲ ಬ್ರಿಟಿಶ್ ಬೇಸಿಗೆಯಲ್ಲಿ ಮನುಷ್ಯ ವ್ಯಕ್ತಿತ್ವ ಆವಾಹನೆ ಆಗಿದೆಯೋ ಅಥವಾ ಮನುಷ್ಯ ವ್ಯಕ್ತಿತ್ವದಲ್ಲಿ ಬ್ರಿಟಿಶ್ ಸಮ್ಮರಿನ ಗುಣಗಳು ಸೇರಿಕೊಂಡಿವೆಯೋ, ಗೊತ್ತಿಲ್ಲ.
ಬ್ರಿಟಿಶ್ ಬೇಸಿಗೆಯ ವಿಶ್ಲೇಷಣೆಗೆ ಹೊರಟರೆ ಶೇಕ್ಸ್‌ಪಿಯರ್‌ನ ಸಾಲೊಂದು ಎದುರು ಬರುತ್ತದೆ : ಹೆೋಲಿಸಲೇ ನಿನ್ನನು ಬೇಸಿಗೆಯ ದಿನಕ್ಕೆ? ಪ್ರಕೃತಿಯ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಹೀಗೂ ನೋಡಬಹುದೆಂದು ತೋರಿಸಿ¨ªಾನೆ ಕವಿ ಮಹಾಶಯ. ಬ್ರಿಟಿಶ್ ಬೇಸಿಗೆಯ ವ್ಯಕ್ತಿತ್ವವನ್ನು ಹಿಡಿದಿಟ್ಟ ಈ “ಸುನೀತ’ (ಹದಿನಾಲ್ಕು ಸಾಲುಗಳ ಪದ್ಯ : ಸಾನೆಟ್) ವನ್ನು ತನ್ನ ಗೆಳತಿಯನ್ನು ಗ್ರಹಿಸಿ ಬರೆದನೋ ಅಥವಾ ತನ್ನ ಆಪ್ತ ಸ್ನೇಹಿತನನ್ನು ನೆನೆದು ಬರೆದನೋ ಎನ್ನುವುದೂ ಈಗಲೂ ಶೇಕ್ಸ್Õಪಿಯರನ ಓದುಗರು, ವಿಮರ್ಶಕರು ಚರ್ಚಿಸಬೇಕಾದ ವಿಷಯ.
ಶೇಕ್ಸ್‌ಪಿಯರ್ ಬರೆದ 154 ಸುನೀತಗಳಲ್ಲಿ ಬಹು ಚರ್ಚಿಸಲ್ಪಟ್ಟ ಮತ್ತು ತುಂಬ ಜನಪ್ರಿಯವಾದ ಸುನೀತ ಇದು. ಕೆಲವೊಮ್ಮೆ ಸುಡುಬಿಸಿಲ ಚಂದದ ದಿನ, ಇನ್ನು ಕೆಲವೊಮ್ಮೆ ಜೋರು ಗಾಳಿಗೆ ಬದಲಾಗುವ ವಾತಾವರಣ, ಎಷ್ಟು ಹೊತ್ತಿಗೂ ಬದಲಾಗಬಹುದಾದ ಕಾಲಮಾನ. ಈ ಬ್ರಿಟಿಶ್ ಬೇಸಿಗೆ ನಿರಂತರವೂ ಅಲ್ಲ, ಶಾಶ್ವತವೂ ಅಲ್ಲ. ಆದರೆ, ತನ್ನ ಮಿತ್ರನ ಸ್ನೇಹ (ಅಥವಾ ಗೆಳತಿಯ ಸೌಂದರ್ಯ) ಮಾತ್ರ ತಾತ್ಕಾಲಿಕವಾದ ಬೇಸಿಗೆಯ ದಿನದಂತಲ್ಲ , ಬದಲಾಗಿ ಅದು ಅನುದಿನವೂ ಇರುವಂಥ ಯಾವಾಗಲೂ ಆನಂದ ಕೊಡುವಂಥ ಕುಂದದ, ಕಳೆಯದ ಒಂದು ಶಾಶ್ವತ ಬೇಸಿಗೆ. ಶೇಕ್ಸ್‌ಪಿಯರನ ಈ ಸುನೀತದ ದೃಷ್ಟಿಯಲ್ಲಿ “ಶಾಶ್ವತ ಬೇಸಿಗೆ’ ಅಥವಾ “ಇಟರ್ನಲ್ ಸಮ್ಮರ್’ ಅನ್ನು ಹುಡುಕಹೊರಟರೆ ಅದು ಮಿತ್ರನ ಸ್ನೇಹದÇÉೋ ಪ್ರೇಯಸಿಯ ಪ್ರೀತಿಯÇÉೋ ಮಾತ್ರ ಲಭ್ಯವಾದೀತು. ಈಗ ಹುಟ್ಟಿ, ನಾಳೆ ಬದಲಾಗಿ, ನಾಡಿದ್ದು ಮಾಯ ಆಗುವ ಆಗಸ್ಟ್ ತಿಂಗಳಲ್ಲಿ ಸಿಗಲಿಕ್ಕಿಲ್ಲ. ಬ್ರಿಟಿಶ್ ಬೇಸಿಗೆಯ ಮೂರ್ನಾಲ್ಕು ತಿಂಗಳುಗಳಲ್ಲಿ ಎಲ್ಲೆಲ್ಲೂ ಕಾಣುವ ಬಣ್ಣಬಣ್ಣದ ಹೂಗಳು, ಯೌವ್ವನದ ಕಳೆಹೊತ್ತು ಚಿಗುರೊಡೆದು ಹೂ ಬಿಡುವ ದಟ್ಟ ಮರಗಳು, ದಿಟ್ಟ ಗಿಡಗಳನ್ನು ನಾಚುತ್ತ ತಬ್ಬಿಕೊಳ್ಳುವ ಬಳ್ಳಿಗಳು- ಇವೆಲ್ಲ ಬೇಸಿಗೆಯ ಉನ್ಮಾದವನ್ನು ಕರಗಿಸುತ್ತವೆ.
ಮತ್ತೆ ನಮ್ಮೊಡನೆ ಉಳಿಯುವುದು ನಾವು ಕೊಡುವ, ಪಡೆಯುವ ಪ್ರೀತಿ ಮಾತ್ರ. ಅದು ಆಗಸ್ಟ್ ತಿಂಗಳ ಬೇಸಿಗೆಗಿಂತ ಚೆಂದ.
– ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್