Advertisement

ನ್ಯೂಯಾರ್ಕ್ ಟು ಲಂಡನ್: 4 ಗಂಟೆಯಲ್ಲಿ 1,290 ಕಿಮೀ ಕ್ರಮಿಸಿದ ಬ್ರಿಟಿಷ್ ಏರ್ ವೇಸ್ ವಿಮಾನ

09:49 AM Feb 12, 2020 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಸಿಯಾರಾ ಬಿರುಗಾಳಿ ಎದ್ದಿರುವಂತೆಯೇ ಬ್ರಿಟಿಷ್‌ ಏರ್‌ವೇಸ್‌ನ ವಿಮಾನವೊಂದು ನ್ಯೂಯಾರ್ಕ್‌ನಿಂದ ಲಂಡನ್‌ನ ಹಿ ಥ್ರೂ ವಿಮಾನ ನಿಲ್ದಾಣಕ್ಕೆ ಬರೋಬ್ಬರಿ ನಾಲ್ಕು ಗಂಟೆ 56 ನಿಮಿಷಗಳಲ್ಲಿ 1,290 ಕಿಮೀ ದೂರ ಕ್ರಮಿಸಿ ದಾಖಲೆ ನಿರ್ಮಿಸಿದೆ.

Advertisement

ವರ್ಜಿನ್‌ ಅಟ್ಲಾಂಟಿಕ್‌ಗೆ ಸೇರಿದ ಮತ್ತೊಂದು ವಿಮಾನ, ನಂತರದ ಕೆಲ ನಿಮಿಷಗಳಲ್ಲಿ ಲಂಡನ್‌ ತಲುಪಿತ್ತು. ಬ್ರಿಟಿಷ್‌ ಏರ್‌ವೇಸ್‌ಗೆ ಸೇರಿದ ವಿಮಾನ ನ್ಯೂಯಾರ್ಕ್‌ನಿಂದ ಶನಿವಾರ ರಾತ್ರಿ 11.20ಕ್ಕೆ ಹೊರಟಿತ್ತು.

2018ರ ಜನವರಿಯಲ್ಲಿ ಬ್ರಿಟಿಷ್‌ ಏರ್‌ವೇಸ್‌ ಮತ್ತು ವರ್ಜಿನ್‌ ಅಟ್ಲಾಂಟಿಕ್‌ ಸಂಸ್ಥೆಗೆ ಸೇರಿದ ವಿಮಾನಗಳು ನ್ಯೂಯಾರ್ಕ್‌ನಿಂದ ಲಂಡನ್‌ಗೆ ಐದು ಗಂಟೆ 13 ನಿಮಿಷಗಳಲ್ಲಿ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು. ಅದನ್ನು ಈಗ ಮುರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next