Advertisement

AI: ವಿಶ್ವದ ಮೊದಲ ಎಐ ಸುರಕ್ಷತ ಕೇಂದ್ರ ಕಚೇರಿಗೆ ಬ್ರಿಟನ್‌ ವೇದಿಕೆ

12:03 AM Oct 28, 2023 | Team Udayavani |

ಲಂಡನ್‌: ವಿಶ್ವದಾದ್ಯಂತ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಹೆಚ್ಚಿರುವ ನಡುವೆಯೇ, ವಿಶ್ವದ ಮೊದಲ ಎಐ ಸುರಕ್ಷತ ಸಂಸ್ಥೆಯು ಬ್ರಿಟನ್‌ನಲ್ಲಿ ಸ್ಥಾಪನೆಗೊಳ್ಳಲಿದ್ದು, ಇದೇ ಪ್ರಧಾನ ಕಚೇರಿಯೂ ಆಗಿರಲಿದೆ ಎಂದು ಬ್ರಿಟನ್‌ ಪ್ರಧಾನಮಂತ್ರಿ ರಿಷಿ ಸುನಕ್‌ ಹೇಳಿದ್ದಾರೆ. ಮುಂದಿನವಾರ ನಡೆಯಲಿರುವ ಮೊದಲ ಜಾಗತಿಕ ಎಐ ಸುರಕ್ಷತ ಶೃಂಗಸಭೆಯ ನೇತೃತ್ವವನ್ನು ಬ್ರಿಟನ್‌ ವಹಿಸಿಕೊಂಡಿರುವ ನಡುವೆಯೇ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Advertisement

ಲಂಡನ್‌ನಲ್ಲಿ ನಡೆದ ಸಭೆಯೊಂದರಲ್ಲಿ ಈ ಕುರಿತು ಮಾತನಾಡಿರುವ ರಿಷಿ, ಎಐ ನಂಥ ತಂತ್ರಜ್ಞಾನಗಳು ಹೊಸ ಕ್ರಾಂತಿಯನ್ನೇ ಸೃಷ್ಟಿಸುವಂಥವು. ವಿದ್ಯುತ್‌ ಬಳಕೆ, ಅಂತರ್ಜಾಲ ಸೇವೆ ಉಗಮದಂಥ ಬೆಳವಣಿಗೆಗಳು ಪರಿಚಯವಾದ ಬಳಿಕ ಅವುಗಳ ಉಪಯೋಗದ ಜತೆಗೆ ಅಪಾಯಗಳೂ ಪರಿಚಿತವಾದವು. ಅದೇ ರೀತಿ ಎಐನ ಬಳಕೆ ಜತೆಗೆ ಅವುಗಳ ಅಪಾಯದ ಬಗ್ಗೆಯೂ ಜಾಗೃತರಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನವೆಂಬರ್‌ 1 ಮತ್ತು 2ರಂದು ನಡೆಯಲಿರುವ ಶೃಂಗಸಭೆ ಎಐ ಸುರಕ್ಷತೆ ಬಗ್ಗೆ ಬೆಳಕು ಚೆಲ್ಲಲಿದ್ದು, ವಿಶ್ವದ ಮೊದಲ ಎಐ ಸುರಕ್ಷತ ಕೇಂದ್ರ ಕಚೇರಿಯಾಗಿ ಬ್ರಿಟನ್‌ ಗುರುತಿಸಿಕೊಳ್ಳಲಿದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next