ರುಚಿಕರ ತರಕಾರಿಗಳ ಸಾಲಿನಲ್ಲಿ ಬದನೆಕಾಯಿಗಂತೂ ಪ್ರಮುಖ ಸ್ಥಾನ ಇದ್ದೇ ಇದೆ. ವಾಂಗೀಬಾತ್, ರೊಟ್ಟಿ- ಎಣ್ಣೆಗಾಯಿಯ ರುಚಿ ನೋಡಿದವರು ಈ ಮಾತನ್ನು ತಕರಾರಿಲ್ಲದೆ ಒಪ್ಪಿಕೊಳ್ಳುತ್ತಾರೆ. ಎಣ್ಣೆಗಾಯಿಯಷ್ಟೇ ಅಲ್ಲದೆ, ಬದನೆಯಿಂದ ತಯಾರಿಸಬಹುದಾದ ಇನ್ನೂ ಕೆಲವು ಸ್ವಾದಿಷ್ಟ ಖಾದ್ಯಗಳ ರೆಸಿಪಿ ಇಲ್ಲಿದೆ.
Advertisement
1. ಬೆಣ್ಣೆ ಬದನೆಕಾಯಿಬೇಕಾಗುವ ಸಾಮಗ್ರಿ: ಎಳೆ ಬದನೆಕಾಯಿ- ಕಾಲು ಕೆ.ಜಿ, ಹಸಿ ಮೆಣಸು-6, ಈರುಳ್ಳಿ-2, ಬೆಣ್ಣೆ- ಅರ್ಧ ಕಪ್, ಕರಿಬೇವು- 2 ಎಸಳು, ಇಂಗು ಮತ್ತು ಜೀರಿಗೆ ತಲಾ ಎರಡು ಚಮಚ, ಸಾಸಿವೆ, ಕಡಲೇಬೇಳೆ, ಸಕ್ಕರೆ ಮತ್ತು ಉದ್ದಿಬೇಳೆ ತಲಾ ಒಂದು ಚಮಚ, ಹುಣಸೇಹಣ್ಣು, ಅರಿಶಿಣ, ಉಪ್ಪು, ಬೆಲ್ಲ, ಗರಂ ಮಸಾಲೆ, ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಷ್ಟು, ಹುರಿದ ಶೇಂಗಾ ಪುಡಿ ಮತ್ತು ತುರಿದ ಕೊಬ್ಬರಿ ತಲಾ ಒಂದು ಕಪ್.
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆ, ಎಳ್ಳು- ಎರಡು ಚಮಚ, ಒಣಮೆಣಸಿನಕಾಯಿ-4, ಈರುಳ್ಳಿ- 1, ರುಚಿಗೆ ತಕ್ಕಷ್ಟು ಹುಣಸೆಹಣ್ಣು, ಬೆಲ್ಲ, ಉಪ್ಪು, ಕೊತ್ತಂಬರಿ ಸೊಪ್ಪು
Related Articles
Advertisement
3. ಬದನೆಕಾಯಿ ಮಂಚೂರಿಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆಕಾಯಿ, ನಾಲ್ಕು ತುಣುಕು ಬ್ರೆಡ್, ಈರುಳ್ಳಿ-2, ಹಸಿಮೆಣಸು- 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಸಾಸ್, ಮೈದಾ ಹಿಟ್ಟು- ತಲಾ 2 ಚಮಚ, ಸಾಸಿವೆ, ಖಾರದ ಪುಡಿ, ತೆಂಗಿನ ತುರಿ, ಧನಿಯಾ ಪುಡಿ, ಜೀರಿಗೆ- ತಲಾ 1 ಚಮಚ, ಅರಿಶಿಣ, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಎಣ್ಣೆ ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಬ್ರಡ್ ತುಣುಕನ್ನು ಪುಡಿ ಮಾಡಿಕೊಳ್ಳಿ. ಬದನೆಕಾಯಿಯನ್ನು ಬೇಯಿಸಿ, ನುಣ್ಣಗೆ ಮಾಡಿಕೊಂಡು, ಅದಕ್ಕೆ ಉಪ್ಪು, ಖಾರ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಮೈದಾ ಹಿಟ್ಟು ಹಾಕಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ, ಬ್ರೆಡ್ ಪುಡಿಯಲ್ಲಿ ಹೊರಳಿಸಿ, ಎಣ್ಣೆಯಲ್ಲಿ ಫ್ರೆç ಮಾಡಿ ತೆಗೆದಿಟ್ಟುಕೊಳ್ಳಿ. ಬೇರೊಂದು ಬಾಣಲೆಗೆ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಸಾಸಿವೆ ಹಾಕಿ ಅವು ಸಿಡಿದ ನಂತರ ಹೆಚ್ಚಿದ ಈರುಳ್ಳಿ ಹಾಕಿ. ಅದು ಮೆತ್ತಗಾದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ತೆಂಗಿನ ತುರಿ, ಧನಿಯಾ ಪುಡಿ ಹಾಕಿ ಸ್ವಲ್ಪ ಕಾಲ ಮುಚ್ಚಿಡಿ. ಬಳಿಕ, ಈಗಾಗಲೇ ಕರಿದಿರುವ ಬದನೆಕಾಯಿ ಉಂಡೆ, ಟೊಮೇಟೊ ಸಾಸ್, ಕೊತ್ತಂಬರಿ ಸೊಪ್ಪು ಹಾಕಿ, ಸಣ್ಣ ಉರಿಯಲ್ಲಿ ಐದು ನಿಮಿಷ ಬಿಸಿ ಮಾಡಿ ಕೆಳಗಿಳಿಸಿದರೆ ಮಂಚೂರಿ ರೆಡಿ. 4. ಬದನೆ ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆಕಾಯಿ, ಹೆಚ್ಚಿದ ಈರುಳ್ಳಿ- 1 ಕಪ್, ಒಣ ಮೆಣಸಿನಕಾಯಿ-3, ಹಸಿಮೆಣಸಿನಕಾಯಿ-3 ಹುಣಸೆಹಣ್ಣು, ಉಪ್ಪು, ಅರಿಶಿಣ, ಕರಿಬೇವು ಸ್ವಲ್ಪ, ಜೀರಿಗೆ, ಸಾಸಿವೆ, ಉದ್ದಿನಬೇಳೆ- ತಲಾ 2 ಚಮಚ, ಇಂಗು- ಅರ್ಧ ಚಮಚ, ಎಣ್ಣೆ- ನಾಲ್ಕು ಚಮಚ. ಮಾಡುವ ವಿಧಾನ: ಬದನೆಕಾಯಿಯನ್ನು ಎಣ್ಣೆ ಹಚ್ಚಿ ಸುಟ್ಟು, ಸಿಪ್ಪೆ ಸುಲಿದು ಅದರ ಒಳಗಿನ ತಿರುಳನ್ನು ನುಣ್ಣಗೆ ಮಾಡಿಕೊಳ್ಳಿ. ಅದಕ್ಕೆ, ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಕಲಸಿ. ಆನಂತರ ಒಣಮೆಣಸು, ಹಸಿಮೆಣಸು, ಹುಣಸೆಹಣ್ಣು, ಉಪ್ಪು, ಅರಿಶಿಣ ಮಿಶ್ರ ಮಾಡಿ ಸಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ನಂತರ ಸಿದ್ಧ ಮಾಡಿಟ್ಟುಕೊಂಡ ಎರಡೂ ಮಿಶ್ರಣವನ್ನು ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಎರಡು ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿದರೆ ಚಟ್ನಿ ರೆಡಿ. – ಶಿವಲೀಲಾ ಸೊಪ್ಪಿಮಠ