ಬಂಟ್ವಾಳ: ಎಲ್ಲೆಂದರಲ್ಲಿ ಕಸ ಎಸೆಯುವ, ವಾಹನದಲ್ಲಿ ಕಸವನ್ನು ತಂದು ಕದ್ದುಮುಚ್ಚಿ ರಸ್ತೆ ಬದಿ ಎಸೆಯುವ ವ್ಯಕ್ತಿಗಳಿಗೆ ತುಂಬೆ ಗ್ರಾ.ಪಂ. ಆಡಳಿತ ವಿನೂತನ ರೀತಿಯಲ್ಲಿ ತಿಳಿವಳಿಕೆ ಮೂಡಿಸಿದೆ. ತುಂಬೆ ಮುಳಿಯಪಡ್ಪು ಹಿಂದೂ ರುದ್ರಭೂಮಿಯ ಎದುರುಗಡೆ ಕಸ ಸುರಿಯಲು ಬಂದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ, ಸುರಿದ ಕಸವನ್ನು ಅದೇ ವಾಹನಕ್ಕೆ ತುಂಬಿಸಿ ಹಿಂದೆ ಕಳುಹಿಸಿ ನಿಗದಿತ ಸ್ಥಳದಲ್ಲಿ ಅದನ್ನು ವಿಲೇವಾರಿಗೆ ಕ್ರಮ ಕೈಗೊಂಡಿದೆ. ಮುಂದಕ್ಕೆ ಕದ್ದುಮುಚ್ಚಿ ಇಂತಹ ಕೃತ್ಯ ನಡೆಸದಂತೆ ಎಚ್ಚರಿಕೆ ನೀಡಿದೆ.
ಕಾರ್ಯಾಚರಣೆ
ರಾ.ಹೆ. ಬದಿಯಲ್ಲಿ ಮುಂಜಾನೆ ವಾಹನದಲ್ಲಿ ಕಸ ತಂದು ಎಸೆದು ಹೋಗುತ್ತಿದ್ದರು.ರುದ್ರಭೂಮಿ, ನದಿ ಬದಿಯಲ್ಲಿ ಇತ್ಯಾದಿ ಕಡೆ ಕಸ ತಂದು ಹಾಕುವವರ ಉಪಟಳ ಹೆಚ್ಚಾಗಿತ್ತು. ಇದಕ್ಕೊಂದು ಪರಿಹಾರ ಕಾಣುವುದಕ್ಕಾಗಿ ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ಮತ್ತು ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಸಹಿತ ಎಲ್ಲ ಸದಸ್ಯರು ಸದ್ದಿಲ್ಲದೆ ವಿನೂತನ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.